ದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,46,786 ಮಂದಿಗೆ ಕೊರೋನ ಸೋಂಕು ಧೃಡಪಟ್ಟಿದ್ದು 2,624 ಮಂದಿ ಮೃತಪಟ್ಟಿದ್ದಾರೆ. ಈ ಎರಡೂ ಪ್ರಕರಣಗಳು ಇಡೀ ವಿಶ್ವದಲ್ಲಿ ಈವರೆಗೆ ಒಂದೇ ದಿನದಲ್ಲಿ ದಾಖಲಾದ ಅತ್ಯಧಿಕ ಪಾಸಿಟಿವ್ ಮತ್ತು ಸಾವಿನ ದಾಖಲೆಯಾಗಿದೆ.


ತೀವ್ರ ಸ್ವರೂಪದ ಕೊರೋನ ಅಟ್ಟಹಾಸಕ್ಕೆ ತುತ್ತಾಗಿರುವ ಜಗತ್ತಿನ ರಾಷ್ಟçಗಳ ಪೈಕಿ ಶುಕ್ರವಾರ ಬ್ರೆಝಿಲ್‌ನಲ್ಲಿ 79,719, ಅಮೆರಿಕದಲ್ಲಿ 62,642 ಮತ್ತು ಟರ್ಕಿಯಲ್ಲಿ 54,791 ಪ್ರಕರಣಗಳು ದಾಖಲಾಗಿವೆ. ನಿನ್ನೆ ವಿಶ್ವಾದ್ಯಂತ ಒಟ್ಟು 8.9 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಭಾರತ ಒಂದರಲ್ಲೇ 3,46,786 ಹೊಸ ಪ್ರಕರಣ ದಾಖಲಾಗಿರುವುದು ಆತಂಕಕಾರಿಯಾಗಿದೆ.
ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,66,10,481, ಒಟ್ಟು ಗುಣಮುಖರಾದವರ ಸಂಖ್ಯೆ 1,38,67,997, ಒಟ್ಟು ಸಾವಿನ ಸಂಖ್ಯೆ 1,89,544, ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 25,52,940 ಆಗಿದೆ.
ಇನ್ನು ಕರ್ನಾಟಕದಲ್ಲಿ ಶುಕ್ರವಾರ 26,962 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಬೆಂಗಳೂರು ನಗರ ಪ್ರದೇಶವೊಂದರಲ್ಲೇ 16,662 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಕೊರೊನಾ ಸೋಂಕಿನಿAದಾಗಿ 190 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ರಾಜ್ಯದಲ್ಲಿ 14,075 ಮಂದಿ ಸೋಂಕಿನಿAದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 12,74,959 ಪ್ರಕರಣಗಳು ದಾಖಲಾಗಿದ್ದು ಸದ್ಯ 214311 ಸಕ್ರಿಯ ಪ್ರಕರಣಗಳಿವೆ.












