Tuesday, February 3, 2026

ಜಿಲ್ಲೆ, ರಾಜ್ಯ, ದೇಶದ ದೈನಂದಿನ ಕೊರೋನ ಪಾಸಿಟಿವ್, ಸಾವು ಅಪ್ ಡೇಟ್

ದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4,12,784 ಲಕ್ಷ ಮಂದಿಗೆ ಹೊಸ ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿದೆ. ಹಾಗೆಯೇ 3,980 ಸೋಂಕಿತರು ನಿನ್ನೆ ಒಂದೇ ದಿನ ಕೊನೆಯುಸಿರೆಳೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 920 ಮಂದಿ ಬಲಿಯಾಗಿದ್ದಾರೆ. ಉಳಿದಂತೆ ಉತ್ತರ ಪ್ರದೇಶ (357), ಕರ್ನಾಟಕ (346), ಪಂಜಾಬ್ (182), ಹರ್ಯಾಣ (181) ಮತ್ತು ತಮಿಳುನಾಡು (167) ಇದುವರೆಗಿನ ಗರಿಷ್ಠ ಸಂಖ್ಯೆಯನ್ನು ದಾಖಲಿಸಿವೆ.

ಬುಧವಾರ ಒಂದೇ ದಿನ ದೇಶದಲ್ಲಿ 78 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಹೆಚ್ಚಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 35 ಲಕ್ಷದ ಗಡಿ ದಾಟಿದೆ.

ಕರ್ನಾಟಕದಲ್ಲಿ ಬುಧವಾರ ಒಂದೇ ದಿನ 50,112 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ ಹೊರತುಪಡಿಸಿ ಒಂದೇ ದಿನ ಅತ್ಯಧಿಕ ಪ್ರಕರಣ ದಾಖಲಾದ ಎರಡನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಮಹಾರಾಷ್ಟ್ರದಲ್ಲಿ 57,640 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ.

ರಾಜ್ಯಾದ್ಯಂತ ಒಟ್ಟು 4,87,288 ಸಕ್ರಿಯ ಪ್ರಕರಣಗಳಿದ್ದು ಅವರೆಲ್ಲರೂ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ದ.ಕ. ಜಿಲ್ಲೆಯಲ್ಲಿ ಬುಧವಾರ ನಾಲ್ಕು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 1,529 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈವರೆಗೆ 50,345 ಮಂದಿ ಕೊರೋನ ಸೋಂಕಿಗೊಳಗಾಗಿದ್ದು ಒಟ್ಟು 768 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ.

More from the blog

ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು. ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್...

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಸಂಸದ ಕ್ಯಾ. ಚೌಟ ಮನವಿ

ನವದೆಹಲಿ: ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ ('ಸಮುದ್ರ ತೀರದ ಪವನ ಶಕ್ತಿ' Offshore Wind Energy)...

ಅಂಗಡಿ, ಹೋಟೆಲ್ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ – ದರ್ಶನ್ ಎಚ್. ವಿ

ಮಂಗಳೂರು : ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿಗಳು ಹೋಟೇಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ...

Panemangaluru : ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರನಿಗೆ ಗಾಯ

ಬಂಟ್ವಾಳ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಸ್ಕೂಟರ್ ಸವಾರ ನರಿಕೊಂಬು ನಿವಾಸಿ ಮುಸ್ತಫಾ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಸ್ಕೂಟರ್ ಸವಾರ ಮುಸ್ತಫಾ ಅವರು ನರಿಕೊಂಬು ರಸ್ತೆಯಿಂದ...