Friday, July 4, 2025

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ : ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ಹಲವರು ಗಾಯಗೊಂಡ ಘಟನೆ ಬಂಟ್ವಾಳದ SVS ಕಾಲೇಜಿನ ತಿರುವಿನಲ್ಲಿ ನಡೆದಿದೆ.

ಪುಂಜಾಲ ಕಟ್ಟೆ, ಮೂರ್ಜೆ, ವಾಮದಪದವು , ಮಾರ್ಗವಾಗಿ ಬಿ. ಸಿ ರೋಡಿಗೆ ತೆರಳುತ್ತಿದ್ದ ಬಸ್ ಇದಾಗಿದ್ದು, ಈ ಬಸ್ ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರು ಪ್ರಯಣಿಸುತ್ತಿದ್ದು, ಹಲವು ವಿದ್ಯಾರ್ಥಿಗಳು ಪರೀಕ್ಷೆಗೆಂದು ತೆರಳುತ್ತಿದ್ದರು.

ಘಟನೆಯಲ್ಲಿ ಪ್ರಯಾಣಿಕರಾದ ಶ್ಯಾಮಲಾ, ಸ್ವಾತಿ, ಅಭಿನವ್, ಗೋಪಾಲ ಸಪಲ್ಯ ವಾಮದಪದವು, ಹೇಮಾವತಿ ವಾಮದಪದವು, ಚಂದ್ರಾವತಿ ಅಣ್ಣಳಿಕೆ, ವಿದ್ಯಾರ್ಥಿನಿಯರಾದ ಕೊಯ್ಲದ ವಹೀದಾ, ಮಾವಿನಕಟ್ಟೆಯ ವಿಖ್ಯಾತಿ, ವಾಮದಪದವಿನ ವೈಷ್ಣವಿ ಹಾಗೂ ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದೇ ಸಮಯದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಗೊಂಡ ಪ್ರಯಾಣಿಕರ ಆರೋಗ್ಯ ವಿಚಾರಿಸಿದರು. ಮಾತ್ರವಲ್ಲದೆ, ಅಪಘಾತದ ಹಿನ್ನೆಲೆಯನ್ನು ತಿಳಿದುಕೊಂಡು ಘಟನೆಯ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಶಾಸಕ ರಾಜೇಶ್ ನಾಯ್ಕ್ ಕೂಡಾ ಉಪಸ್ಥಿತರಿದ್ದರು.

More from the blog

B. C. ROAD : ಜು.19ರಿಂದ 27ರವರೆಗೆ ಭಾರತ ದರ್ಶನ ಯಕ್ಷಗಾನ ತಾಳಮದ್ದಳೆ ನವಾಹ..

ಬಂಟ್ವಾಳ : ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಅವರಿಂದ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಸಹಭಾಗಿತ್ವದಲ್ಲಿ ಭಾರತ ದರ್ಶನ ಎಂಬ ಯಕ್ಷಗಾನ ತಾಳಮದ್ದಳೆ...

ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ: ಬೇಬಿ ಕುಂದರ್….

ಬಂಟ್ವಾಳ : ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಜನರ ಸಮಸ್ಯೆ ಪರಿಹಾರ ಮಾಡುತ್ತೇನೆ, ಭ್ರಷ್ಟಾಚಾರ ರಹಿತ ಕೆಲಸಕ್ಕೆ ಒತ್ತು ನೀಡುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ‌ಕುಂದರ್ ತಿಳಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರದ...

ದ. ಕ ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್ ಫೋರ್ಸ್ ರಚನೆ – ಸಿಎಂಗೆ ಬಿ. ರಮಾನಾಥ ರೈ ಅಭಿನಂದನೆ..

ಬೆಂಗಳೂರು :  ದ.ಕ.ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಸರಣಿ ಕೊಲೆಗಳು ಮತೀಯ ಸಂಘರ್ಷಣೆಗಳನ್ನು ಮಟ್ಟ ಹಾಕುವ ಸಲುವಾಗಿ ಕರ್ನಾಟಕ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ದ.ಕ.ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್...

ಬೂಡ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ: ಕಾಂಗ್ರೆಸ್ ಮುಖಂಡ ಮಹಮ್ಮದ್ ನಂದಾವರ ಆಕ್ರೋಶ

ಬಂಟ್ವಾಳ: ಇಲ್ಲಿನ ನಗರ ಯೋಜನಾ ಪ್ರಾಧಿಕಾರದಲ್ಲಿ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಆರೋಪಗಳು ಕೇಳಿ ಬಂದಿದ್ದು, ಪ್ರಾಧಿಕಾರದ ವಿರುದ್ದ ಕಾಂಗ್ರೆಸ್ ಮುಖಂಡ ಮಹಮ್ಮದ್ ನಂದಾವರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರದಲ್ಲಿ...