ಬಂಟ್ವಾಳ: ನವೋದಯ ಪ್ರಕಾಶನ ಚಿತ್ರದುರ್ಗ ಸಂಘಟಿಸುವ ನವೋದಯ ಕನ್ನಡ ಪರೀಕ್ಷೆಯಲ್ಲಿ ಮೂಡುಪಡುಕೋಡಿ ರಝಾನಗರದ ಬುರೂಜ್ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಾಧನೆಗೈದಿದ್ದಾರೆ.

4ನೇ ತರಗತಿ ವಿದ್ಯಾರ್ಥಿ ತೃಷಾಗೆ ರಾಜ್ಯ ರ್‍ಯಾಂಕ್, 1ನೇ ತರಗತಿ ವಿದ್ಯಾರ್ಥಿ ಜೀವನ್ ಎಂ.ಕೆ. ಜಿಲ್ಲಾ ರ್‍ಯಾಂಕ್ ಹಾಗೂ ಮೋಹ್ಸಿನಾ ಬಾನು ಮುಕ್ತಾರ್ ತಾಲೂಕು ಮಟ್ಟದ ರ್‍ಯಾಂಕ್ ಪಡೆದಿದ್ದಾರೆ. ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಶೇಕ್ ರಹ್ಮತ್ತುಲ್ಲಾ, ಮುಖ್ಯ ಶಿಕ್ಷಕಿ ಜಯಶ್ರೀ ಬಿ. ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದರು.

