ಬಂಟ್ವಾಳ: ಬುರೂಜ್ ಆ. ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ಆಟಿದ ಕೂಟ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಶಂಕರ ಶೆಟ್ಟಿ ಉಪಾಧ್ಯಕ್ಷರು ಗ್ರಾ.ಪಂ. ಇರ್ವತ್ತೂರು ಕಲಸೆಗೆ ಅಕ್ಕಿ ಹಾಕುವ ಮೂಲಕ ಉದ್ಘಾಟಿಸಿದರು. ಇಂತಹ ಆಚರಣೆಗಳಿಂದ ನಮ್ಮ ಹಳ್ಳಿ ತಿಂಡಿ ತಿನಿಸುಗಳು ಮತ್ತೊಮ್ಮೆ ನೆನಪಿಸಿದಂತಾಗುತ್ತದೆ ಎಂದರು.

ಪ್ರಶಾಂತ್ ಕೋಟ್ಯಾನ್ ಸದಸ್ಯರು ಗ್ರಾ. ಪಂ. ಇರ್ವತ್ತೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಕಾರ್ಯಕ್ರಮದ ಆಚರಣೆಯ ಮಹತ್ವವನ್ನು ಮಕ್ಕಳು ತಿಳಿದು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಿ ಎಂದರು. ಆಧುನೀಕರಣದತ್ತ ನಾವು ಸಾಗುತ್ತಿದ್ದು, ನಮ್ಮ ಹಳ್ಳಿ ತಿನಿಸುಗಳನ್ನೇ ಮರೆಯುತ್ತಿದ್ದೇವೆ. ಫಾಸ್ಟ್ ಫುಡ್‌ನ್ನು ಇಂದಿನ ಮಕ್ಕಳು ಅವಲಂಬಿಸುತ್ತಿದ್ದು, ಕೆಟ್ಟ ಪರಿಣಾಮವನ್ನು ಮುಂದೆ ಜೀವನದಲ್ಲಿ ಅನುಭವಿಸಬೇಕಾಗಬಹುದು ಎಂದು ಜನಾಬ್ ಶೇಕ್ ರಹ್ಮತ್ತುಲ್ಲಾ ಸಂಚಾಲಕರು ಬುರೂಜ್ ಮಕ್ಕಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸುಧೀಂದ್ರ ಗ್ರಾ. ಪಂ. ಸದಸ್ಯರು ಇರ್ವತ್ತೂರು, ಗೀತಾ ಶಿಕ್ಷಕರು ಕಲಾಬಾಗಿಲು ಅಂಗನವಾಡಿ, ಜಯಶ್ರೀ.ಬಿ. ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಹಾಜರಿದ್ದರು.ವಿದ್ಯಾರ್ಥಿಗಳಿಂದ ತುಳುಗಾದೆ ಒಗಟುಗಳು, ತುಳು ಪದ್ಯಗಳು, ಭಾಷಣ ಹಳ್ಳಿ ತಿನಿಸುಗಳ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ನಡೆದವು. ಕಾರ್ಯಕ್ರಮದ ನಿರೂಪಣೆಯನ್ನು ಪವಿತ್ರಾ ಶೆಟ್ಟಿ, ಸ್ವಾಗತ ಭಾಷಣವನ್ನು ಹರಿಣಾಕ್ಷಿ ಹಾಗೂ ಚೇತನಾ ಜೈನ್ ವಂದನಾರ್ಪಣೆಗೈದರು.