ಬಂಟ್ವಾಳ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಬಂಟ್ವಾಳ ಇದರ 10ನೇ ತರಗತಿಯ ವಿದ್ಯಾರ್ಥಿಯಾದ ಮೊಹಮ್ಮದ್ ಹಬೀಬುರ್ ರೆಹಮಾನ್ ಇವರು ನವೋದಯ ಪ್ರಕಾಶನ ಚಿತ್ರದುರ್ಗ ನಡೆಸಿದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ರಾಷ್ಟ್ರ ರ್‍ಯಾಂಕ್ ಗಳಿಸಿ ಸಂಸ್ಥೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದಾರೆ. ಇವರು ಕೆ. ಕಾಸಿಂ ಮುಸ್ಲಿಯಾರ್ ಮತ್ತು ಸುಮಯ್ಯ ಇವರ ಪುತ್ರನಾಗಿದ್ದು, ಕೊಲ್ಯ, ತಣ್ಣೀರುಪಂತ ಗ್ರಾಮದ ಬೆಳ್ತಂಗಡಿ ತಾಲೂಕಿನ ನಿವಾಸಿಯಾಗಿರುತ್ತಾರೆ. ಇವರಿಗೆ ಚಿನ್ನದ ಪದಕದೊಂದಿಗೆ ಪ್ರಶಸ್ತಿ ಪತ್ರ ಲಭಿಸಿರುತ್ತದೆ. ಸಂಸ್ಥೆಯಿಂದ ಭಾಗವಹಿಸಿದ ರಾಫೀದಬಾನು ೩ನೇ ತರಗತಿ ರಾಜ್ಯ ರ್‍ಯಾಂಕ್, ತ್ರಿನೇಶ್ ಎಲ್.ಕೆ.ಜಿ. ಜಿಲ್ಲಾ ರ್‍ಯಾಂಕ್, ಯಶ್ವಿತ್ ಯು.ಕೆ.ಜಿ. ಮತ್ತು ಧನುಷ್ 4ನೇ ತರಗತಿ ತಾಲೂಕು ರ್‍ಯಾಂಕ್ ಪಡೆದಿರುತ್ತಾರೆ. ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗಣರಾಜ್ಯೋತ್ಸವದಂದು ಗುರುತಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಆಧರಿಸಿ ನವೋದಯ ಪ್ರಕಾಶನವು ಸಂಸ್ಥೆಯನ್ನು ಉತ್ತಮ ರಾಷ್ಟ್ರ ಶಾಲೆ ಎಂದು ಗುರುತಿಸಿದೆ.
