ಜೂ: , ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಮಾರು ೨೦೦೦ ಎಕರೆ ಕೃಷಿ ಭೂಮಿಗೆ ನೀರುಣಿಸುವ ೪೫ ಕೋಟಿ ರೂಪಾಯಿಗಳ ನೇತ್ರಾವತಿ ನದಿ ಏತ ನೀರಾವರಿ ಯೋಜನೆಯ ಮಂಜೂರಾತಿಗಾಗಿ ಕಲ್ಲಡ್ಕದ ಡಾ| ಪ್ರಭಾಕರ ಭಟ್ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ನೇತ್ರಾವತಿ ನದಿ ದಂಡೆಗೆ ತಾಗಿಕೊಂಡು ಇರುವ ಈ ಬಾಳ್ತಿಲ ಗ್ರಾಮವು ಒಟ್ಟು ೩,೯೪೩ ಎಕರೆಗಳಾಗಿದ್ದು ೬೨೭೨ ಜನಸಂಖ್ಯೆಯನ್ನು ೧೩೦೦ ಕುಟುಂಬಗಳನ್ನು ಹೊಂದಿದ್ದು ಈ ಭಾಗದ ಜನರ ಬಹುದಿನಗಳ ನಿರೀಕ್ಷೆಯೊಂದು ಇದೀಗ ಕೈಗೂಡಿದಂತಾಗಿದೆ. ಈ ಯೋಜನೆಯಿಂದ ರೈತರ ಜಮೀನಿಗೆ ನೇರವಾಗಿ ನೀರನ್ನು ಹರಿಯ ಬಿಡುವುದಲ್ಲದೇ ಕೆರೆ ಬಾವಿ ಹಾಗೂ ಕೊಳವೆಬಾವಿಗಳ ನೀರಿನ ಮಟ್ಟ ಹಾಗೂ ಒಟ್ಟು ಅಂತರ್ಜಲದ ಮಟ್ಟವು ಮೇಲೇರಲಿದೆ ಹಾಗೂ ಇಡೀ ಗ್ರಾಮ ಹಚ್ಚಹಸಿರಾಗಲಿದೆ.
ಮುಖ್ಯಮಂತ್ರಿಗಳನ್ನು ಭೇಟಿಮಾಡಿದ ನಿಯೋಗದಲ್ಲಿ ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಹಾಗೂ ಗ್ರಾಮಸ್ಥರಾದ ಗೋಪಾಲ ಶೆಣೈ ಮತ್ತಿತರರು ಜೊತೆಗಿದ್ದರು


