ಬಂಟ್ವಾಳ: ದ್ಬಿಚಕ್ರ ವಾಹನದಲ್ಲಿ ಹೋಗುವ ವೇಳೆ ವ್ಯಕ್ತಿಯೋರ್ವನ ಕೈಯಲ್ಲಿ ದ್ದ ಬಂಗಾರದ ಬ್ರೆಸ್ ಲೈಟ್ ಕಳೆದು ಹೋದ ಘಟನೆ ಬಿಸಿರೋಡಿನ ಲ್ಲಿ ಗುರುವಾರ ಸಂಜೆಯ ನಡೆದಿದೆ.
ಬಿಸಿರೋಡ್ ಕೈಕುಂಜೆ ನಿವಾಸಿ ಪ್ರಕಾಶ್ ಅವರ ಕೈಯಲಿದ್ದ ಸುಮಾರು ನಾಲ್ಕು ಪವನ್ ತೂಕದ ಬ್ರೆಸ್ ಲೈಟ್ ಕಳೆದು ಹೋಗಿದೆ.
ಕೆಲಸದ ನಿಮಿತ್ತ ಕೈಕಂಬದಿಂದ ಬಿಸಿರೋಡ್ ಕಡಿಮೆ ಕಡೆಗೆ ತಮ್ಮ ಬೈಕಿನಲ್ಲಿ ಸಂಚಾರ ಮಾಡುವ ವೇಳೆ ಕೈಯಲ್ಲಿ ದ್ದ ಬಂಗಾರದ ಬ್ರೆಸ್ ಲೈಟ್ ಬಿದ್ದುಹೋಗಿರಬೇಕು ಎಂದು ಅವರು ತಿಳಿಸಿದ್ದಾರೆ.
ಬಿಸಿರೋಡಿನ ಆಸುಪಾಸಿನಲ್ಲಿ ಯಾರಿಗಾದರೂ ಕಾಣಸಿಕ್ಕಿ ಕೈ ಸೇರಿದ್ದರೆ ದಯವಿಟ್ಟು ಪ್ರಕಾಶ ಅವರ ಮೊಬೈಲ್ ಫೋನ್ ಸಂಖ್ಯೆ 9980777637 ಗೆ ಸಂಪರ್ಕ ಮಾಡುವಂತೆ ಅವರು ವಿನಂತಿ ಮಾಡಿದ್ದಾರೆ.
ಯಾರಿಗಾದರೂ ಬಂಗಾರ ಸಿಕ್ಕಿದ್ದು ವಾಪಾಸು ಅವರು ವಾರಸುದಾರ ರಿಗೆ ನೀಡಿದರೆ ಸೂಕ್ತ ವಾದ ಬಹುಮಾನವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

