ಬಂಟ್ವಾಳ: ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್ ನಲ್ಲಿ ಪುನರ್ ಸ್ಥಾಪನೆಯಾಗಿರುವ
ಕೆಥೋಲಿಕ್ ಸಭಾ ದ ನೂತನ ಅಧ್ಯಕ್ಷರಾಗಿ ಅಪೋಲಿನ್ ಪಿಂಟೋ ಆಯ್ಕೆಯಾಗಿದ್ದಾರೆ.
ಭಾನುವಾರ ಚರ್ಚಿನಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಅಲೆಕ್ಸ್ ಮೋರಸ್, ಕಾರ್ಯದರ್ಶಿಯಾಗಿ ಗ್ರೆಟ್ಟಾ ಲಸ್ರಾದೋ, ಸಹಕಾರ್ಯದರ್ಶಿಯಾಗಿ ಅನಿತಾ ಮಾರ್ಟಿಸ್, ಖಜಾಂಚಿಯಾಗಿ ಪಿಯಾದ್ ವೇಗಸ್, ಆಯ್ಕೆಯಾದರು.

ಅಧ್ಯಕ್ಷ, ಸಹಿತ ಎಲ್ಲಾ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯನ್ನು ಸ್ಥಾಪಕ ಅಧ್ಯಕ್ಷ ರೋಶನ್ ಬೊನಿಫಾಸ್ ಮಾರ್ಟಿಸ್, ಬೊರಿಮಾರ್ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ, ಮಂಗಳೂರು ಕೆಥೋಲಿಕ್ ಸಭಾದ ಅಧ್ಯಕ್ಷರಾದ ರಾಲ್ಫ್ ಡಿ ಕೋಸ್ತ, ಮೊಗರ್ನಾಡು ವಲಯ ಕೆಥೋಲಿಕ್ ಸಭಾದ ಅಧ್ಯಕ್ಷ ಆ್ಯಂಟನಿ ಡಿ’ಸೋಜ ಚುನಾವಣಾ ವೀಕ್ಷಕರಾಗಿ ಭಾಗವಹಿಸಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಉಳಿದಂತೆ ಸಂದೇಶ ಪ್ರತಿನಿಧಿಯಾಗಿ ಮೇರಿ ಡಿ’ಸೋಜ, ಸ್ತ್ರೀ ಸಂಚಾಲಕಿಯಾಗಿ ಪ್ರಿಯಾ ಪಿಂಟೋ, ರಾಜಕೀಯ ಸಂಚಾಲಕರಾಗಿ ಲಾರೆನ್ಸ್ ಪಿಂಟೋ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ಐವನ್ ಮಾರ್ಟಿಸ್ ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆ ಬಳಿಕ ನೂತನ ಪದಾಧಿಕಾರಿಗಳನ್ನು ಬೊರಿಮಾರ್ ಚರ್ಚ್ ಹಾಗೂ ಪಾಲನಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು.