Wednesday, January 28, 2026

ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಯೇ ದೇವರ ಮೇಲಿರುವ ಪ್ರೀತಿ : ಬಿಷಪ್ ಸೆರಾವೊ.

ಬಂಟ್ವಾಳ : ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಯೇ ದೇವರ ಮೇಲಿರುವ ನಿಜವಾದ ಪ್ರೀತಿ, ಬೊರಿಮಾರ್ ಚರ್ಚ್ ನಲ್ಲಿ ಇದು ಸಾಕ್ಷಾತ್ಕಾರಗೊಳ್ಳುತ್ತಿದೆ ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ| ಫ್ರಾನ್ಸಿಸ್ ಸೆರಾವೊ ಹೇಳಿದರು.
ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಬೊರಿಮಾರ್ ಚರ್ಚ್ ಗೆ ಆದಿತ್ಯವಾರ ಭೇಟಿ ನೀಡಿದ ಅವರು, ಬೊರಿಮಾರ್ ಚರ್ಚ್ ನ ವ್ಯಾಪ್ತಿಗೆ ಒಳಪಟ್ಟು ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವವರ ಹೆಸರಿನಲ್ಲಿ ವಿಶೇಷ ಬಲಿಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಕಳೆದ 125 ವರ್ಷದಲ್ಲಿ ದೇವರು ವಿಶೇಷ ರೀತಿಯಲ್ಲಿ ಬೊರಿಮಾರ್ ಚರ್ಚ್ ನಲ್ಲಿ ವಾಸಿಸಿ ಬಂದಿರುವ ಭಕ್ತಾದಿಗಳಿಗೆ ನೀಡಿದ ಆಶೀರ್ವಾದಕ್ಕೆ ಪ್ರತೀ ತಿಂಗಳಿನಲ್ಲಿ ಆಚರಿಸುವ ನಾನಾ ಕಾರ್ಯಕ್ರಮಗಳೇ ಸಾಕ್ಷಿ ಮತ್ತು ದೇವರ ಮೇಲೆ ತೋರಿಸಿದ ಪ್ರೀತಿ ಎಂದಿಗೂ ಕರಗಿ ಹೋಗದು, ಅವನು ಯಾವತ್ತೂ ನಮ್ಮೊಂದಿಗಿದ್ದಾನೆ ಎಂದು ಅವರು ಹೇಳಿದರು. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಅದೃಷ್ಟವನ್ನು ದೇವರು ನನಗೂ ಕರುಣಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ಧರ್ಮಗುರು ವಂದನೀಯ ಗ್ರೆಗರಿ ಪಿರೇರಾ, ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಮಾರ್ಟಿಸ್ ರವರನ್ನು ಅಭಿನಂದಿಸಿದರು.

 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ವಂದನೀಯ ಫಾದರ್ ರೋಬರ್ಟ್ ಡಿ’ಸೋಜರವರು ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವವರ ಕುಟುಂಬದವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ವಂದನೀಯ ಫಾದರ್ ಲ್ಯಾನ್ಸಿ ಮತ್ತು ವಿಕ್ಟರ್ ಡಯಾಸ್, ಸಿಸ್ಟರ್ ನ್ಯಾನ್ಸಿ, ಚರ್ಚ್‌ ಪಾಲನಾ ಸಮಿತಿ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿವಮೊಗ್ಗ ಬಿಷಪ್‌ ಡಾ.ಫ್ರಾನ್ಸಿಸ್ ಸೆರಾವೋ ರವರನ್ನು ಚರ್ಚ್ ಪಾಲನಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಮಾರ್ಟಿಸ್ ಸ್ವಾಗತಿಸಿದರು.
ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ವಂದಿಸಿದರು. ಅರಬ್ ದೇಶದಲ್ಲಿ ಬಹುವರ್ಷ ಉದ್ಯೋಗದಲ್ಲಿದ್ದು ನಿವೃತ್ತಿ ಜೀವನ ನಡೆಸುತ್ತಿರುವ ತೋಮಸ್ ಲಸ್ರಾದೋ ಅರಬ್ ವೇಷಭೂಷಣ ಧರಿಸಿ ಕಾರ್ಯಕ್ರಮ ನಿರ್ವಹಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಬಲಿಪೂಜೆಯ ಬಳಿಕ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭ ವಿದೇಶದಲ್ಲಿ ಉದ್ಯೋಗದಲ್ಲಿರುವವರ ಪ್ರಾಯೋಜಕತ್ವದಲ್ಲಿ “ಜೆರಿ ಮತ್ತು ಜೆರಿ ನೈಟ್” ಬಳಗದಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

More from the blog

ಸಜೀಪ : ಜ.28, 29,30ರಂದು ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್

ಬಂಟ್ವಾಳ : ಜಲಾಲಿಯ್ಯಾ ಜುಮಾ ಮಸ್ಜಿದ್, ಚಟ್ಟೆಕ್ಕಲ್, ಸಜಿಪ ಇದರ ಆಶ್ರಯದಲ್ಲಿ ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಬುರ್ದಾ ಮಜ್ಲಿಸ್ ಜಿಸ್ತಿಯಾ ಖುತ್‌ಬಿಯತ್ ಜ.28, 29,30 ರಂದು ಜಲಾಲಿಯ್ಯ ಜುಮಾ ಮಸೀದಿ...

ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಒಡಿಯೂರುಶ್ರೀ

ವಿಟ್ಲ: ಸದೃಢ ದೇಶ ನಿರ್ಮಾಣದಲ್ಲಿ ಸೈನಿಕರ ಪರಿಶ್ರಮ, ತ್ಯಾಗ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಒಡಿಯೂರು ರಾಜಾಂಗಣದಲ್ಲಿ...

ವಿಟ್ಲ ಪಡ್ನೂರು : ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ವಿಟ್ಲ: ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಬದಲಾಯಿಸಿದ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ವಿಟ್ಲ ಪಡ್ನೂರು ಗ್ರಾಮ...

ಪುತ್ತೂರು : ಅಕ್ರಮ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ – ನಾಲ್ವರ ಬಂಧನ

ಪುತ್ತೂರು : ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿ ದ್ದಾರೆ ಮೊಹಮ್ಮದ್ ಹರ್ಷದ್...