ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ ವತಿಯಿಂದ ಬಂಟ್ವಾಳ ಗೌಡರ ಯಾನೆ ಒಕ್ಕಲಿಗರ ಸಂಘ ಹಾಗೂ ಮಹಿಳಾ ಘಟಕದ ಸಹಕರಾದಿಂದ ಸ್ವಸಮಾಜದ ಸುಮಾರು 264 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್‍ಯಕ್ರಮ ವಿಟ್ಲ ಅಕ್ಷಯ ಸಮುದಾಯ ಭವನದಲ್ಲಿ ನಡೆಯಿತು.
ಮಾತೃ ಸಂಘದ ಅಧ್ಯಕ್ಷ ಮೋಹನ ಕಾಯಾರ್‌ಮಾರ್, ಗೌರವಾಧ್ಯಕ್ಷ ಲಿಂಗಪ್ಪ ಗೌಡ, ಬೆಳಿಯಪ್ಪ ಗೌಡ ಪೂರ್ಲಪ್ಪಾಡಿ, ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ, ಯುವ ವೇದಿಕೆಯ ಅಧ್ಯಕ್ಷ ವಿನಯ ಸಂಕೇಶ, ಅನಂತಾಡಿ ಗ್ರಾಮ ಸಮಿತಿ ಅಧ್ಯಕ್ಷ ಪುರಂದರ ಗೌಡ ಉಪಸ್ಥಿತರಿದ್ದರು.
ಯತೀಶ್ ಪಾದೆ ಕಾರ್‍ಯಕ್ರಮ ನಿರೂಪಿಸಿ, ವಂದಿಸಿದರು.
