ಬಂಟ್ವಾಳ: ಶ್ರೀ ಮಹಾಗಣಪತಿ ದೇವಸ್ಥಾನ ಬೊಂಡಾಲ ಇಲ್ಲಿ ಶ್ರೀ ಮಹಾಗಣಪತಿ ದೇವರ ಗರ್ಭ ಗುಡಿಗೆ ಶಿಲಾನ್ಯಾಸ ಸಮಾರಂಭ ಮೇ 13ರಂದು ಬೆಳಿಗ್ಗೆ ವೇದಮೂರ್ತಿ ಶ್ರೀ ಈಶ್ವರ ಭಟ್ ಮಾದಕಟ್ಟೆ ಇವರಿಂದ ಭೂಮಿಪೂಜೆ ನಡೆದು. ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಕ್ಷೇತ್ರ ಗುರುಪುರ ಇವರ ಮಾರ್ಗದರ್ಶನದಲ್ಲಿ ಡಾ| ಪ್ರಭಾಕರ ಭಟ್ ಕಲ್ಲಡ್ಕ ಶಿಲಾನ್ಯಾಸ ಸಮಾರಂಭ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಶ್ರೀ ಭಯಂಕೇಶ್ವರ ದೇವಸ್ಥಾನ ನರಿಕೊಂಬುವಿನ ಆಡಳಿತ ಮುಕ್ತೇಸರರಾದ ಗಣೇಶ ಸೋಮಯಾಜಿ, ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವುವಿನ ಆಡಳಿತ ಮುಕ್ತೇಸರರಾದ ಶಾಂತಾರಾಮ ಶೆಟ್ಟಿ ಬೋಳಂತೂರು, ಷಣ್ಮುಗ ಸುಬ್ರಮಣ್ಯ ದೇವಸ್ಥಾನ ಮುಗುಳಿಯ ಆಡಳಿತ ಮುಕ್ತೇಸರರಾದ ಜಯಶಂಕರ ಬಾಸ್ರೀತ್ತಾಯ, ಮಂಗಳಾ ಇಲೆಕ್ಟ್ರಿಕಲ್ಸ್ ಗಂಜಿಮಠ ಮಂಗಳೂರು ಉದ್ಯಮಿ ಭಾಸ್ಕರ ಭಟ್ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಪಾಧ್ಯಕ್ಷರಾದ ರಘು ಸಫಲ್ಯ, ಕಾರ್ಯದರ್ಶಿಗಳಾದ ಬೊಂಡಾಲ ಜನಾರ್ದನ ಕುಲಾಲ್, ಬೊಂಡಾಲ ವಿನೋದ್ ಶೆಟ್ಟಿ, ವಸಂತ ಅಂಚನ್, ಪ್ರವೀಣ್ ಕುಮಾರ್, ವಸಂತ್ ಕುಲಾಲ್, ನಾರಾಯಣ ಬಂಗೇರ, ಆತ್ಮರಂಜನ್ ಶೆಟ್ಟಿ ಉಪಾಧ್ಯಕ್ಷರಾದ ನಾಗೇಶ್ ಆಕ್ರುತಿ ಕಲ್ಲಡ್ಕ, ಹಾಗೂ ಊರ ಭಕ್ತಾದಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಯರಾಮ ಹೊಳ್ಳ ನಾಗ್ತೀಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಜೊತೆ ಕೋಶಾಧಿಕಾರಿ ಪ್ರೇಮ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.