Wednesday, January 28, 2026

ಫೆ.14-16 ಬೊಳ್ಳಿಮಾರ್ ಶ್ರೀ ಆದಿ ಶಕ್ತಿ ಕೊರಗಜ್ಜ ಕ್ಷೇತ್ರ : ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ

ಬಂಟ್ವಾಳ : ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಶ್ರೀ ಆದಿಶಕ್ತಿ ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಆದಿ ಶಕ್ತಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಮತ್ತು ಸಹ ಪರಿವಾರ ದೈವಗಳ ಹಾಗೂ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಫೆ.14ರಿಂದ ಫೆ.16ರವರೆಗೆ ನಡೆಯಲಿದೆ.

ಕ್ಷೇತ್ರದ ಹಿನ್ನೆಲೆ: ಇಲ್ಲಿನ ಧರ್ಮದರ್ಶಿ ವಿಜಯ ಸಾಲ್ಯಾನ್ ಅವರು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಗೋಚರ ಶಕ್ತಿಯ ಆವಾಹನೆಯಾದ ಅನುಭವವನ್ನು ಅವರು ಮರೆತರೂ ಕ್ರಮೇಣ ಮಂತ್ರ ತಂತ್ರಗಳ ಸಾಧಕರಾಗಿ ಕನಸಲ್ಲಿ ಕಂಡಂತೆ ಕಾರಿಂಜದ ಕೆರೆಯಲ್ಲಿ ದೊರೆತ ಕಲ್ಲನ್ನು ಪ್ರತಿಷ್ಠಾಪಿಸಿ ಶ್ರೀ ಕೊರಗಜ್ಜ ಸಾನ್ನಿಧ್ಯ ಉಂಟಾಯಿತು. ಕಾಲಾಂತರದಲ್ಲಿ ದೈವ ಪ್ರೇರಣೆಯಂತೆ ಅಷ್ಟ ಮಂಗಲ ಪ್ರಶ್ನೆ ಪ್ರಕಾರ ಶ್ರೀ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಸಹ ಪರಿವಾರ ದೈವಗಳ ಗುಡಿ ನಿರ್ಮಾಣದ ಸಂಕಲ್ಪವಾಗಿ ಇದೀಗ ಪುನರ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವಕ್ಕೆ ಸಜ್ಜು ಗೊಂಡಿದೆ.
ಫೆ.14ರಂದು ಬೆಳಗ್ಗೆ  ಹೊರೆ ಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಲಿದೆ. ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಸಂಜೆ 5ರಿಂದ ಭೂವರಾಹ ಹೋಮ, ವಾಸ್ತು ಹೋಮ ಇತ್ಯಾದಿ ವೈದಿಕ ಕಾರ್ಯಕ್ರಮಗಳು, ಸಂಜೆ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ ಅರ್ಗಂಟ್ ತುಳುನಾಟಕ ಪ್ರದರ್ಶನವಿದೆ.
ಫೆ.15ರಂದು ಬೆಳಗ್ಗೆ ಗಣಹೋಮ, ತೋರಣ ಮುಹೂರ್ತ, ಪೂರ್ವಾಹ್ನ 9.12 ಕ್ಕೆ ಮೀನ ಲಗ್ನದಲ್ಲಿ ದೇವಿಯ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಹೋಮ,ಪಂಚಾಮೃತ ಅಭಿಷೇಕ 108 ಕಲಾಶಾಭಿಷೇಕ, ಮಹಾದುರ್ಗಾ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೈವಗಳ ಸನ್ನಿಽಯಲ್ಲಿ ಸುದರ್ಶನ ಹೋಮ,ವಾಸ್ತು ಹೋಮ, ವಾಸ್ತು ಬಲಿ, ದೈವಗಳ ಬಿಂಬಾವಾಸ, ಕುಣಿತ ಭಜನೆ, ಬೊಳ್ಳಿಮಾರ್ ತುಡರ್ ತುಳು ಭಕ್ತಿ ಗೀತೆಗಳ ವೀಡಿಯೋ ಆಲ್ಬಂ ಬಿಡುಗಡೆ ನಡೆಯಲಿದೆ.ರಾತ್ರಿ ವಿಟ್ಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಫೆ.16 ರಂದು ಗಣಹೋಮ ದೈವಗಗಳಿಗೆ ಕಲಶ ಪೂಜೆ ಹಾಗೂ ಪುನರ್ ಪ್ರತಿಷ್ಠಾ ಕಲಶಾಭಿಷೇಕ  ಮತ್ತು ಪರ್ವ ಸೇವೆ. ಸಂಜೆ ವಿಜಯ್ ಕುಮಾರ್ ಕೊಡಿಯಾಲ್‌ಬಲ್ ಅವರ ಕಲಾ ಸಂಗಮ ತಂಡದಿಂದ ಶಿವದೂತೆ ಗುಳಿಗೆ ತುಳು ನಾಟಟಕ, ರಾತ್ರಿ 7 ರಿಂದ ಮಂತ್ರದೇವತೆ, ಕಲ್ಲುರ್ಟಿ,ಕೊರತಿ ಹಾಗೂ ಗುಳಿಗ ದೈವಗಳ ನೇಮೋತ್ಸವ. ರಾತ್ರಿ 8 ಗಂಟೆಗೆ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಧರ್ಮದರ್ಶಿ ವಿಜಯ ಸಾಲ್ಯಾನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More from the blog

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...