ಪಾಣೆಮಂಗಳೂರು : ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಬೋಗೋಡಿ ಇದರ 11ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಝೋಮ್ ಮೀಟಿಂಗ್‌ನಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿ ಜಮಾಲ್ ಬಂಗ್ಲಗುಡ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಿಲ್ವಾನ್ ಮೆಲ್ಕಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಮುಝಮ್ಮಿಲ್ ಬೋಗೋಡಿ. ಜೊತೆ ಕಾರ್ಯದರ್ಶಿಯಾಗಿ ಮುಸ್ತಫ ಮೆಲ್ಕಾರ್ ಕೋಶಾಧಿಕಾರಿಯಾಗಿ ರಾಶಿದ್ ಬೋಗೋಡಿ ಅವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಬೈದ್ ಜುಬೈಲ್, ಸಾಬಿತ್ ಜುಬೈಲ್, ರಾಫಿದ್ ಸ್ಕಾಟ್‌ಲಾಂಡ್, ನಜೀಬ್ ದುಬೈ, ಜಾಫರ್ ಜುಬೈಲ್, ರಿಫಾತ್ ದುಬೈ, ಹಫೀಝ್ ದುಬೈ, ರಾಶಿದ್ ಜುಬೈಲ್, ನಿಝಾಮ್ ಜಿದ್ದಾ, ಸಿನಾನ್ ಬೆಂಗಳೂರು, ಮುಸರ್ರಪ್ ಮೆಲ್ಕಾರ್, ಸಹದ್ ಮೆಲ್ಕಾರ್, ಕಬೀರ್ ಆಲಡ್ಕ ಅವರನ್ನು ನೇಮಿಸಲಾಯಿತು. ಎಂದು ಕಾರ್ಯದರ್ಶಿ ರಿಲ್ವಾನ್ ಮೆಲ್ಕಾರ್ ರ್ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.