ಮಂಗಳೂರು: ಇತ್ತೀಚೆಗೆ ಅರಬಿ ಸಮುದ್ರದಲ್ಲಿ ಹಡಗಿಗೆ ಢಿಕ್ಕಿ ಹೊಡೆದು ಮುಳುಗಡೆಯಾದ ಮೀನುಗಾರಿಕಾ ಬೋಟಿನಿಂದ ನಾಪತ್ತೆಯಾದ ಮತ್ತಿಬ್ಬರು ಮೀನುಗಾರರ ಮೃತದೇಹ ಶುಕ್ರವಾರ ಪತ್ತೆಯಾಗಿದೆ.


ಮಂಗಳೂರು ಲೈಟ್‌ಹೌಸ್‌ನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಎಪ್ರಿಲ್ 13ರಂದು ತಡ ರಾತ್ರಿ ಹಡಗಿಗೆ ಢಿಕ್ಕಿ ಹೊಡೆದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿತ್ತು. ಈ ಬೋಟ್‌ನಲ್ಲಿ ಒಟ್ಟು 14 ಮೀನುಗಾರರು ಇದ್ದರು.
ಶುಕ್ರವಾರ ಪತ್ತೆಯಾದ ಮೃತದೇಹ ಗುರುತು ಇನ್ನೂ ತಿಳಿದುಬಂದಿಲ್ಲ. 14 ಮಂದಿ ಮೀನುಗಾರರ ಪೈಕಿ ಇಬ್ಬರನ್ನು ರಕ್ಷಿಸಲಾಗಿತ್ತು. ಮೂವರ ಮೃತದೇಹ ಅದೇ ದಿನ ಪತ್ತೆಯಾಗಿತ್ತು. ಮತ್ತೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ಏಳು ಮಂದಿಗಾಗಿ ಶೋಧ ಮುಂದುವರಿದಿದೆ.












