ಬಿ.ಸಿ.ರೋಡ್ : ಇಲ್ಲಿನ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 8ರಂದು ವಿದ್ಯಾರ್ಥಿಗಳ ಸ್ವಾಗತೋತ್ಸವ, ವನಮಹೋತ್ಸವ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಬಂಟ್ವಾಳ ರೋಟರಿ ನಿಯೋಜಿತ ಅಧ್ಯಕ್ಷತೆ ಶಿವಾನಿ ಬಾಳಿಗ ಅಧ್ಯಕ್ಷತೆ ವಹಿಸಲಿರುವರು. ಬಂಟ್ವಾಳ ಪುರಸಭಾ ಸದಸ್ಯೆ ವಿದ್ಯಾವತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ರೋಟರಿ ಅಧ್ಯಕ್ಷ ಮಂಜುನಾಥ ಆಚಾರ್ಯ, ಉದ್ಯಮಿ ಚಂದ್ರಹಾಸ ಶೆಟ್ಟಿ, ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಅಧ್ಯಕ್ಷೆ ರಾಜೇಶ್ ಎಲ್. ನಾಯಕ್, ಕೃಷಿಕ ಮೋಹನ ಅಗ್ರಬೈಲು ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳ ಪುಸ್ತಕ ದಾನಿಗಳಾದ ಬೆಂಗಳೂರಿನ ಬೋಸ್ಟಿಕ ಆಫ್ ಇಂಡಿಯಾ ಕಂಪೆನಿಯ ಅಸಿಸ್ಟೆಂಟ್ ಮೆನೇಜರ್ ಯತೀಶ್ ಕೈಕುಂಜೆ, ಪಾಣೆಮಂಗಳೂರಿನ ಮಾಂಡವಿ ಮೋಟಾರ್‍ಸ್‌ನ ಜಯಂತ್ ಅಗ್ರಬೈಲು, ಕುವೈಟ್ ಸಿವಿಲ್ ಇಂಜಿನಿಯರ್ ಚರಣ್ ಕೈಕುಂಜೆ ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.


