ಬಂಟ್ವಾಳ: ಎ.18 ನಡೆಯವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಬಹಿರಂಗ ಸಭೆಯ ಮೂಲಕ ಮತಬೇಟೆಗೆ ಗುರುವಾರ ಚಾಲನೆ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಲ್ಲಿ ಗುರುವಾರ ಬಹಿರಂಗ ಸಭೆ ಹಾಗೂ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ್ದಾರೆ.
ಸಂಜೆ ಬಂಟ್ವಾಳ ವಿಧಾನ ಸಭಾಕ್ಷೇತ್ರದ ಪ್ರಥಮ ಬೂತ್ ಸಂಗಬೆಟ್ಟು ಸಿದ್ದಕಟ್ಟೆಯ ಪೇಟೆಯಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಸುಧಾರಣೆ ಮಾಡುವ ಏಕೈಕ ನಾಯಕ ಅದು ನರೇಂದ್ರ ಮೋದಿ, ಜಗತ್ತು ಭಾರತದ ಕಡೆ ನೋಡುತ್ತಿದೆ. ಜಗತ್ತನ್ನು ಎತ್ತರಕ್ಕೆ ಏರಿಸುವ ಶಕ್ತಿ ನರೇಂದ್ರ ಮೋದಿಗಿದೆ ಹಾಗಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು, ಮೋದಿ ಪ್ರಧಾನಿ ಯಾಗಲು ಕರ್ನಾಟಕದ ಪ್ರತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಳನ್ನು ಗೆಲ್ಲಿಸಿ ಕಳುಹಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಆರ್ಥಿಕ ಸುಧಾರಣೆ ಮಾಡಿದ ಜನನಾಯಕ ನರೇಂದ್ರ ಮೋದಿ ಎಂದು ಅವರು ಹೇಳಿದರು.
ಅರಬ್ ದೇಶದಲ್ಲಿ ಗಣಪತಿ ಆರಾಧನೆಗೆ ಅವಕಾಶ ಮಾಡಿಕೊಟ್ಟ ಪ್ರಥಮ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಜಗತ್ತಿನಲ್ಲಿ ಭಾರತದ ಸೈನಿಕ ಶಕ್ತಿಯ ಪರಿಚಯ ನರೇಂದ್ರ ಮೋದಿಯಿಂದ ಆಗಿದೆ.

ಸೈನಿಕರಿಗೆ ಧೈರ್ಯ ನೀಡಿ ವಿರೋಧಿ ಗಳಿಗೆ ತಕ್ಕ ಪಾಠ ಹೇಳುವ ಮೂಲಕ ಜಗತ್ತಿದೆ ಸಂದೇಶ ಕಳಿಸುವ ಕೆಲಸ ನರೇಂದ್ರ ಮೋದಿಯವರಿಂದ ಸಾಧ್ಯವಾಯಿತು.
ಲೋಕಪಾಲ ನೇಮಕದಮೂಲಕ ಅಣ್ಷಾ ಹಜಾರೆಗೆ ನ್ಯಾಯ ಒದಗಿಸುವ ಕೆಲಸ ಆಯಿತು. ಆರೋಗ್ಯ ಭಾಗ್ಯ, ಆಯುಸ್ಮಾನ್, ಸ್ವಚ್ಚಭಾರತ್, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಗ್ಯಾಸ್ ಹೀಗೆ ಐದು ವರ್ಷಗಳ ಲ್ಲಿ 333 ಯೋಜನೆ ಗಳನ್ನು ನೀಡಿದ ಮೊದಲ ಪ್ರಧಾನ ಮಂತ್ರಿ ನರೇಂದ್ರ ಮೋದಿ , ಹಾಗಾಗಿ ಗ್ರಾಮಗಳಿಗೆ ಶಕ್ತಿ ನೀಡಿ ರಾಷ್ಟ್ರ ನಿರ್ಮಾಣದ ಕಾರ್ಯ ಪ್ರಧಾನ ಮಂತ್ರಿ ಮಾಡಿದ್ದಾರೆ ಹಾಗಾಗಿ ನರೇಂದ್ರ ಮೋದಿ ಯವರ ಮೇಲೆ ಜನರಿಗೆ ವಿಶ್ವಾಸ ವಿದೆ ಎಂದು ಅವರು ಹೇಳಿದರು.
16520 ಕೋಟಿ ಹಣ ದ.ಕ.ಜಿಲ್ಲೆಗೆ ಕೇಂದ್ರ ಸರಕಾರ ನೀಡಿದೆ. ಬಿಸಿರೋಡಿನಿಂದ ಮೂಡಬಿದ್ರೆಯವರೆಗೆ ಚತುಷ್ಪತ ರಸ್ತೆ ಕಾಮಗಾರಿ ಮಂಜೂರಾಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಸಜ್ಜನಿಕೆಯ ಆದರ್ಶದ ರಾಜಕಾರಣ ಮಾಡಿದ್ದೇನೆ, ಜಿಲ್ಲೆಯ ಅಭಿವೃದ್ಧಿ ಗೆ ಶಕ್ತಿಮೀರಿ ಶ್ರಮಿಸಿದ್ದೇನೆ.
ಜಿಲ್ಲೆಯ ಜನರಿಗೆ ಅನ್ಯಾಯ ವಾದಾಗ ಪ್ರತಿ ಬಾರಿ ಹೋರಾಟದ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತನೀಡುವಂತೆ ಮನವಿ ಮಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮಾತನಾಡಿ ಈ ಬಾರಿಯ ಚುನಾವಣೆ ಪ್ರಮುಖವಾಗಿ ದ್ದು ಭವಿಷ್ಯವನ್ನು ಬರೆಯುವ ಚುನಾವಣೆ ಹಾಗಾಗಿ ಸೂಕ್ತ ವಾದ ಅಭ್ಯರ್ಥಿ ನಳಿನ್ ಕುಮಾರ್ ಅವರನ್ನು ಗೆಲ್ಲಿಸಲು ಮನವಿ ಮಾಡಿದರು.
ವಿದೇಶದಲ್ಲೂ ಗೌರವಯುತವಾಗಿ ಭಾರತೀಯ ರು ಉದ್ಯೋಗ ದಲ್ಲಿ ರಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಾರಣ ಎಂದರು.
ದೇಶದ ಭದ್ರತೆಯ ಮೇಲೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಪ್ರಮುಖರಾದ ದೇವದಾಸ್ ಶೆಟ್ಟಿ, ಹರಿಕ್ರಷ್ಣ ಬಂಟ್ವಾಳ, ಎ.ರುಕ್ಮಯ ಪೂಜಾರಿ, ಪ್ರಭಾಕರ ಪ್ರಭು,ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರವಿಶಂಕರ್ ಮಿಜಾರ್, ಕೆ.ರತ್ನಕುಮಾರ್ ಚೌಟ, ಸತೀಶ್ ಪೂಜಾರಿ ಅಳಕೆ, ಜಿ.ಆನಂದ, ದಿನೇಶ್ ಅಮ್ಟೂರು, ಜಿತೇಂದ್ರ ಕೊಟ್ಟಾರಿ, ಗುಲಾಬಿ ಶೆಟ್ಟಿ, ಯಶೋದ, ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.