ಬಂಟ್ವಾಳ: ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಎ.೧೫ರಂದು ಸಂಜೆ ವಾಮದಪದವು ಪೇಟೆಯಲ್ಲಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು.
ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ. ಭಟ್, ರಾಮದಾಸ ಬಂಟ್ವಾಳ, ಯಶೋಧರ ಶೆಟ್ಟಿ ದಂಡೆ, ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ವಿಜಯ ರೈ ಆಲದಪದವು, ರಮೇಶ್ ಕುಡ್ಮೇರ್, ಪ್ರಭಾಕರ ಪ್ರಭು, ರತ್ನಕುಮಾರ ಚೌಟ, ವಸಂತ ಕುಮಾರ್ ಅಣ್ಣಲಿಕೆ, ಜಯರಾಮ ಶೆಟ್ಟಿ ಕಾಪು, ವಿನುತಾ ಕೊರ್ನೋಡಿ, ಆಶಾ ಜೆ. ಶೆಟ್ಟಿ, ಮೋಹನ ದಾಸ ಗಟ್ಟಿ, ಕಮಲ್ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್ , ವೆಂಕಟೇಶ್ ಭಟ್, ಗೋಪಾಲ ಕೃಷ್ಣ ಚೌಟ, ವಿನೋದ ಪೂಜಾರಿ, ಗಣನಾಥ ಶೆಟ್ಟಿ ಕೆಮ್ಮಾರು, ನಾಗರಾಜ ಶೆಟ್ಟಿ, ಗಂಗಾಧರ ಪೂಜಾರಿ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
