ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂಭ್ರಮಾಚರಣೆಯನ್ನು ಬಂಟ್ವಾಳ ಬಿಜೆಪಿ ವತಿಯಿಂದ ಬಿ.ಸಿ ರೋಡಿನ ಪಕ್ಷದ ಕಚೇರಿಯ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್ ,ತಾ.ಪಂ ಸದಸ್ಯರಾದ ಪ್ರಭಾಕರ ಪ್ರಭು ,ಬಿಜೆಪಿ ಕಾರ್ಯದರ್ಶಿ ಸಿತಾರಾಮ ಪೂಜಾರಿ,ಮಚ್ಚೇಂದ್ರ ಸಾಲ್ಯಾನ್ ,ಕೇಶವ ,ಮನೋಜ್,ವಿನಿತ್,ರೂಪೇಶ್ ಆಚಾರ್ಯ,ಗಣೇಶ್ ದಾಸ್,ಮಹೇಶ್ ,ರಾಜರಾಮ್ ನಾಯಕ್,ನಾಗೇಶ್ ಬೊಂಡಾಲ,ಯಶವಂತ ನಗ್ರಿ,ಸತೀಶ್ ಪಲ್ಲಮಜಲು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲ್ಲಡ್ಕ ದಲ್ಲೂ ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಶ್ರೀ ರಾಮ ಮಂದಿರ ದ ಮುಂಭಾಗ ದಲ್ಲಿ ಸಂಭ್ರಮ ವ್ಯಕ್ತಪಡಿಸಿದರು.ಪ್ರಮುಖ ರಾದ ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಸುಜಿತ್ ಕೊಟ್ಟಾರಿ, ಕಾ. ಕೃಷ್ಣಪ್ಪ ಕಲ್ಲಡ್ಕ,ಕುಶಾಲ ಕಲ್ಲಡ್ಕ, ಮತ್ತಿತರರು ಉಪಸ್ಥಿತರಿದ್ದರು.