ಪಕ್ಷವನ್ನು ತಾಯಿ ಸ್ಥಾನದಲ್ಲಿರಿಸಿ ಸಂಘಟನೆಯನ್ನು ಮಾಡಿ ದೇಶಕ್ಕಾಗಿ ಹೋರಾಟ ನಡೆಸಿದ ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ಭಾರತ ಸಶಕ್ತ ವಾಗಿದೆ, ಬಾಳ್ತಿಲ ಗ್ರಾಮದ ರೀತಿಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿದರೆ ಪ್ರತಿ ಗ್ರಾಮವೂ ಬಾಳ್ತಿಲ ಗ್ರಾಮವಾಗುತ್ತದೆ ,

ಹಳ್ಳಿಯಿಂದ ದಿಲ್ಲಿವರೆಗೆ ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರ ಪಡೆಯಬೇಕು,ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸಿ, ಚುನಾವಣಾ ರೂಪುರೇಷೆಗಳನ್ನು ತಯಾರಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ 5 ಬೂತ್ ಗಳ ಅಧ್ಯಕ್ಷರುಗಳ ಮನೆಗೆ ಬೇಟಿ ನೀಡಿ ಅಧ್ಯಕ್ಷ ರಿಗೆ ಗೌರವ ಸಲ್ಲಿಸಿ ಮನೆಗೆ ನಾಮಫಲಕ ಅನಾವರಣ ಮಾಡಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ದೀನ್ ದಯಾಳ್ ಅವರ ಅಂತ್ಯೋದಯದ ಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಯಕರು ಸಾಕಾರಗೊಳಿಸಿದ್ದಾರೆ .
ನಮ್ಮ ಕಾಲದಲ್ಲಿ ಯಾವುದೇ ಗೊಂದಲವಿಲ್ಲದೆ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತಿದೆ, ಆರ್ಟಿಕಲ್ಸ್ 370 ರದ್ದು ಅಗಿದೆ ಎಂಬುದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ ಎಂದು ಅವರು ಹೇಳಿದರು.
65 ಕೋಟಿ ಜನರಿಗೆ ಉಚಿತ ವ್ಯಾಕ್ಸಿನೇಷನ್ ನೀಡಿದ ಪ್ರಧಾನಿ ಮೋದಿಯವರ ಸಾಧನೆ ಜಗತ್ತಿನಲ್ಲಿ ಯಾರು ಮಾಡಿಲ್ಲ ಎಂದು ಅವರು ಹೇಳಿದರು.
ಹಿರಿಯರ ಚಿಂತನೆಗಳನ್ನು, ಕನಸುಗಳನ್ನು ನನಸು ಮಾಡುವ ಮಹತ್ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವುದು ನಮ್ಮ ಭಾಗ್ಯವೇ ಸರಿ ಎಂದರು.
ಕಳೆದ 70 ವರ್ಷಗಳ ಕಾಂಗ್ರೇಸ್ ಆಡಳಿತ ಹಾಗೂ ಪ್ರಧಾನಿ ಮೋದಿಯವರ 7 ,ವರ್ಷದ ಅಧಿಕಾರದ ಅವಧಿಯ ಸಾಧನೆ ತುಲನೆ ಮಾಡಿದರೆ ಗೊತ್ತಾಗುತ್ತದೆ.
ಭಾರತವನ್ನು ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರ ಮಾಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಬೂತ್ ಸಂಖ್ಯೆ 155 ಇದರ ಅಧ್ಯಕ್ಷ ಹಿರಣ್ಮಯಿ , ಬೂತ್ ಸಂಖ್ಯೆ 156 ರ ಅಧ್ಯಕ್ಷ ಶಿವರಾಜ್ ಶೆಟ್ಟಿ, ಬೂತ್ ಸಂಖ್ಯೆ 157 ರ ಅಧ್ಯಕ್ಷ ದೀಪಕ್ ಶೆಟ್ಟಿ, ಬೂತ್ ಸಂಖ್ಯೆ 158 ರ ಅಧ್ಯಕ್ಷ ರವಿ ಬೈಲು, ಬೂತ್ ಸಂಖ್ಯೆ 159 ರ ಅಧ್ಯಕ್ಷೆ ಲಕ್ಮೀಗೋಪಾಲ ಆಚಾರ್ಯ ಅವರ ಮನೆಗೆ ಶಾಸಕರು ಬಂಟ್ವಾಳ ಬಿಜೆಪಿ ಸಮಿತಿ ಅಧ್ಯಕ್ಷ ಹಾಗೂ ಪ್ರಮುಖರು ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯಕರ್ತರ ಭಾವನೆಗಳಿಗೆ , ಸಂಘಟನಾತ್ಮಕ ಯೋಜನೆಗಳಿಗೆ, ಯೋಚನೆಗಳಿಗೆ ಶಕ್ತಿ ನೀಡುವ ಉದ್ದೇಶದಿಂದ ಶಾಸಕರು ಪ್ರತಿ ಬೂತ್ ಗಳ ಅಧ್ಯಕ್ಷ ರ ಮನೆಗೆ ಬೇಟಿ ಹಾಗೂ ಕಾರ್ಯಕರ್ತರ ಜೊತೆ ಮಾತನಾಡಿ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲು ಈ ಕಾರ್ಯಕ್ರಮ ಮಾಡಿದ್ದೇವೆ ಎಂದು ಅವರು ಹೇಳಿದರು.
ಪಕ್ಷಕ್ಕೆ ಶಕ್ತಿ ತುಂಬುವ ಕೆಲಸದ ಜೊತೆಗೆ ಮತದಾರರನ್ನು ಬೇಟಿ ಮಾಡಿ ಅವರ ಸಮಸ್ಯೆ ಗಳಿಗೆ ಸ್ಪಂದಿಸುವ ಕೆಲಸ ಕಾರ್ಯ ಕರ್ತರ ಮೂಲಕ ಆಗಬೇಕಾಗಿದೆ.
ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಮಾತನಾಡಿ ದೇಶ, ಸಂಸ್ಕೃತಿ , ಅಚಾರ ವಿಚಾರಗಳಿಗೆ ಶಕ್ತಿ ನೀಡಿ ರಾಷ್ಟ್ರೀಯ ವಿಚಾರಗಳ ಮೂಲಕ ರಾಜಕೀಯಕ್ಕೆ ಭಾರತೀಯ ಜನತಾ ಪಕ್ಷ ಬಂದಿದೆ ಎಂದರು.
ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್ ಮಾತನಾಡಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಸ್ವಂತ ಹಣ ಖರ್ಚು ಮಾಡಿದ ಜಿಲ್ಲೆಯ ಏಕೈಕ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹಾಗಾಗಿ ಅಂತಹ ಓರ್ವ ಬಂಗಾರದ ಗುಣದ ವ್ಯಕ್ತಿಯ ಶ್ರಮಕ್ಕೆ ನಾವು ಜೊತೆಯಾಗಿ ಕೆಲಸ ಮಾಡಬೇಕಾಗಿದೆ, ಆ ಮೂಲಕ ಪಕ್ಷ ಸಂಘಟನೆಗೆ ಒತ್ತು ಕೊಡುವ ಎಂದರು.
ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರನ್ನು ಚೆಂಡೆ ಬ್ಯಾಂಡ್, ವಾದ್ಯ ಹಾಗೂ ಆರತಿ ಬೆಳಗಿ ಹಣೆಗೆ ಕುಂಕುಮ ಹಚ್ಚಿ ತಿಲಕವಿಟ್ಟು ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ವಿಠಲ ನಾಯ್ಕ್, ಲತೀಶ್, ರಂಜಿನಿ, ಮಮತ, ಆನಂದ ಶೆಟ್ಟಿ, ಹರಿಣಾಕ್ಷಿ, ಉತ್ತಮ್ ಕುಮಾರ್, ಚಂದ್ರಶೇಖರ, ಶಿವರಾಜ್ ಶೆಟ್ಟಿ, ಆಶೋಕ್, ಮಲ್ಲಿಕಾ, ಚೈತ್ರ, ಶೋಭಾ, ಬಿ.ಕೆ, ಅಣ್ಣು ಪೂಜಾರಿ ರಾಜೇಶ್, ಹರಿಣಾಕ್ಷಿ,
ಪ್ರಮುಖರಾದ ಕಮಲಾಕ್ಷಿ ಕೆ.ಪೂಜಾರಿ, ಸುಲೋಚನ ಜಿ.ಕೆ.ಭಟ್, ಚೆನ್ನಪ್ಪ ಆರ್.ಕೋಟ್ಯಾನ್, ರಮನಾಥ ರಾಯಿ, ಗಣೇಶ್ ರೈ ಮಾಣಿ, ಆನಂದ ಶಂಭೂರು, ದಿನೇಶ್ ಅಮ್ಟೂರು , ಪ್ರಕಾಶ್ ಅಂಚನ್, ಜನಾರ್ದನ ಬೊಂಡಾಲ, ಮೋಹನ್ ಪಿ.ಎಸ್, ಭಾರತಿ ಚೌಟ, ಲಖಿತ ಆರ್. ಶೆಟ್ಟಿ, ಲೋಕಾನಂದ, ರಮೇಶ್, ಡೊಂಬಯ್ಯ ಟೈಲರ್, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

