ಬಂಟ್ವಾಳ : ಬಿಜೆಪಿ ಬಂಟ್ವಾಳ ಮಹಾಶಕ್ತಿಕೇಂದ್ರದ ವತಿಯಿಂದ ನನ್ನ ಪರಿವಾರ ಬಿಜೆಪಿ ಪರಿವಾರ ಅಭಿಯಾನಕ್ಕೆ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಜಿ.ಆನಂದರವರ ಮನೆಗೆ ಪಕ್ಷದ ದ್ವಜ ಕಟ್ಟುವ ಮೂಲಕ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ಪ್ರ.ಕಾರ್‍ಯದರ್ಶಿ ರಾಮದಾಸ ಬಂಟ್ವಾಳ, ಮಾಜಿ ಪುರಸಭಾ ಅಧ್ಯಕ್ಷರಾದ ದಿನೇಶ್ ಭಂಡಾರಿ,ಮಹಾಶಕ್ತಿ ಕೇಂದ್ರ ಪ್ರ,ಕಾರ್‍ಯದರ್ಶಿ ಗುರುದತ್ ನಾಯಕ್, ಬಂಟ್ವಾಳ ಕಸ್ಬಾ ಗ್ರಾಮದ ಬಿಜೆಪಿ ಅಧ್ಯಕ್ಷರಾದ ಕೃಷ್ಣಪ್ಪ ಪ್ರಜಾರಿ, ಪುರಸಭಾ ಸದಸ್ಯರುಗಳಾದ ದೇವಕಿ, ಮೀನಾಕ್ಷಿ, ಶಶಿಕಲಾ, ಪಕ್ಷದ ಪ್ರಮುಖರಾದ ವಸಂತ ಭಂಡಾರಿ, ಚಂದ್ರಹಾಸ ಪೂಜಾರಿ, ಜಗದೀಶ್ ,ರವಿ ಆಚಾರ್ಯ , ಪ್ರಭಾರಿ ಪ್ರಣಾಮ್‌ರಾಜ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.