Wednesday, July 9, 2025

ಗೋಮಾತೆಯ ಶಾಪದ ಬಲದಿಂದ ಸಿದ್ಧರಾಮಯ್ಯ ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಂಡ್ರು, ಚಾಮುಂಡೇಶ್ವರಿ ಯಲ್ಲೂ ಸೋತಿದ್ದಾರೆ: ಕೆ.ಎಸ್.ಈಶ್ವರಪ್ಪ

ಬಂಟ್ವಾಳ: ಗೋಮಾತೆಯ ಶಾಪದ ಬಲದಿಂದ ಸಿದ್ಧರಾಮಯ್ಯ ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಂಡ್ರು, ಚಾಮುಂಡೇಶ್ವರಿ ಯಲ್ಲೂ ಸೋತಿದ್ದಾರೆ ಎಂದು ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಬ್ರಹ್ಮರಕೂಟ್ಲುವಿನಲ್ಲಿರುವ ಬಂಟ್ವಾಳ ಬಂಟರ ಭವನದಲ್ಲಿ ದ.ಕ.ಜಿಲ್ಲೆ ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಜನಸೇವಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಕಿಸ್ಥಾನ ಜಿಂದಾಬಾದ್ ಅಂತ ಹೇಳಿದನ್ನುಖಂಡಿಸುವ ಯೋಗ್ಯತೆ ಇಲ್ಲದವರು. ಗೋಮಾಂಸ ತಿನ್ನುತ್ತೇನೆ ಅಂತ ಹೇಳ್ತಾರೆ , ಅವರು ತಿಂದು ಸಾಯ್ಲಿ ಎಂದು ವ್ಯಂಗ್ಯವಾಡಿದ ಅವರು ಗೋಮಾತೆ ಯನ್ನು‌ಹಂಗಿಸಿದ ಪಾರ್ಟಿಗಳು ನೆಲಕಚ್ಚಿ ಹೋಗಿದೆ ಎಂದರು.ಪ್ರತಿನಿತ್ಯ ಸಿದ್ಧರಾಮಯ್ಯನವರ ಕನಸಿನಲ್ಲಿ ನಳಿನ್ ಕುಮಾರ್ ಕಟೀಲು ಬರ್ತಾ ಇದ್ದಾರೆ, ಆ ಹಂತದಲ್ಲಿ ನಳಿನ್‌ಕುಮಾರ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ , ಹಳ್ಳಿ ಜನ ಕಾಂಗ್ರೇಸ್ ಗೆ ಮಣ್ಣುಮುಕ್ಕಿಸಿದ್ದಾರೆ. 2 ಪಂಚಾಯತ್ ಗೆದ್ದ ಪಕ್ಷ ಪಾಕಿಸ್ಥಾನಕ್ಕೆ ಜೈಕಾರ ಹಾಕುವ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು ಅಯೋಧ್ಯೆ ಕಟ್ಟುತ್ತವೆ , ಕಾಂಗ್ರೇಸ್ ಗೆ ತಾಕತ್ತಿದ್ದರೆ ಬಿಜೆಪಿಯವರು ಕೆಡವಿದ ಬಾಬರ ಮಸೀದಿ‌ ಕಟ್ತೇವೆ ಅಂತ ಜನರ‌ ಹತ್ರ ಓಟು ಕೇಳಿ ಎಂದರು. ಈ ಸಮಾವೇಶದಲ್ಲಿ ಸ್ಪಷ್ಟವಾಗಿ ಒಂದು ಮಾತನ್ನು ಹೇಳುತ್ತೇನೆ ಮುಂದೆ ಮಥುರಾದಲ್ಲಿ ಕೃಷ್ಣನ ಮಂದಿರವನ್ನೂ ಕಟ್ಟುತ್ತೇವೆ ಎಂಬ ವಿಶ್ವಾಸದ ಮಾತನ್ನು ಹೇಳಿದರು.

ಪಾಕಿಸ್ಥಾನ‌ ಜಿಂದಾಬಾದ್ ಎಂದು ಕೂಗಿದವವರು ಮತ್ತೋಮ್ಮೆ ಅ ಪ್ರಯತ್ನ ಮಾಡಿದರೆ , ನಾಲಗೆಯನ್ನು ಕಿತ್ತು ಹಾಕಬೇಕಾದೀತು ಎಂದು ಎಚ್ಚರಿಸಿದರು. ಕಾನೂನು ಪಾಲನೆ ಮಾಡುವವರ ಮೂಲಕವೇ ಸೂಕ್ತ ಉತ್ತರ ಕೊಡುವುದಾಗಿ ಅವರು ಹೇಳಿದರು.

ನಿಮ್ಮ ತಾಯಿಯೂ ನಮಗೆ ತಾಯಿಯ ಸಮಾನ, ಮುದಿ ಹಸುಗಳನ್ನು ಬಿಜೆಪಿಯವರ ಮನೆ ಮುಂದೆ ಬಿಡ್ತೇವೆ ಅಂತ ಕಾಂಗ್ರೇಸ್ ಹೇಳುತ್ತಿದೆ. ಅವರ ತಾಯಿಗೆ ವಯಸ್ಸಾದ್ರೆ ಹಾಗೆ ಮಾಡ್ತಾರಾ..?

ಎಲ್ಲಾ ಮುಸ್ಲಿಂ ರು, ಕ್ರೈಸ್ತರು ದೇಶದ್ರೋಹಿಗಳಲ್ಲಿ.‌ ಕಾಂಗ್ರೇಸ್ ಅವರನ್ನು ದೇಶದ್ರೋಹಿಗಳನ್ನಾಗಿ ಮಾಡುತ್ತಿದೆ.
ಗ್ರಾಮ ಪಂಚಾಯತ್ ನಿಂದ ಲೋಕಸಭೆಯ ವೆರಗೂ ಮತನೀಡಿದ
ದಕ್ಷಿಣ ಕನ್ನಡದ ಮತದಾರರಿಗೆ ಸಾಷ್ಟಾಂಗ ಪ್ರಮಾಣ ಮಾಡುತ್ತೇನೆ ಎಂದರು.
ಗ್ರಾ.ಪಂ.ನಲ್ಲಿ ಜಯಭೇರಿ ಗಳಿಸಿದ ಸದಸ್ಯರಿಗೆ
5 ದಿನಗಳ ತರಬೇತಿ ಗಳನ್ನು ಆಯೋಜಿಸಲಾಗಿದೆ, ಇದಕ್ಕೆ ರಾಜ್ಯವ್ಯಾಪಿ 900 ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ದರಾಗಿದ್ದಾರೆ , ಇದರ ಸದುಪಯೋಗ ಪಡೆದುಕೊಳ್ಳಲು ಅವರು ತಿಳಿಸಿದರು.

ನಳಿನ್‌ಕುಮಾರ್ ಕಟೀಲು ಹಾಗೂ ಸಂತೋಷ್ ಜಿ ಅವರ ತರಬೇತಿಯಿಂದ ರಾಜ್ಯದ ಮಂತ್ರಿಗಳಿಂದ ಹೇಗೆ ಅನುದಾನ ತರಿಸಿಕೊಳ್ಳಬಹುದು ಎಂಬುದನ್ನು ಜಿಲ್ಲೆಯ ಎಲ್ಲಾ ಶಾಸಕರು ಕಲಿತುಕೊಂಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ
ಪ್ರತೀ ಮನೆಗೂ ಗಂಗೆ ನಮ್ಮ ಅಜೆಂಡಾವಾಗಿದ್ದು , ಗ್ರಾಮಪಂಚಾಯತ್ ನಲ್ಲಿ ಗೆದ್ದವರು ಸುಮ್ಮನೆ ಇರಬೇಡಿ, ಹಳ್ಳಿಗಳ ಅಭಿವೃದ್ಧಿ ಹೆಸರಲ್ಲಿ ಕಾಂಗ್ರೇಸ್ ವ ಕೇವಲ ಭಾಷಣವನ್ನಷ್ಟೇ ಮಾಡಿದೆ, ಆದರೆ ಮೋದಿ ಸರ್ಕಾರ ಬಂದ‌ಬಳಿಕ ಹಳ್ಳಿಗಳಲ್ಲಿ‌ವ್ಯಾಪಕ ಅಭಿವೃದ್ಧಿ ಆಗಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು‌ಮುಂದೆ‌ ಬನ್ನಿ ಎಂದರು. ಯಾವುದೇ ಚುನಾವಣೆ ಬಂದ್ರೂ, ಇಂದೂ ಬಿಜೆಪಿ, ಮುಂದೆಯೂ‌ಬಿಜೆಪಿ… ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ 145 ಗ್ರಾಮಪಂಚಾಯತ್ ಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಗೆ ಏರಿದ್ದು, ದ.ಕ. ಜಿಲ್ಲೆ ‌ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ‌ ಸಾಬೀತಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಮಾತನಾಡಿ, ಗ್ರಾಮಪಂಚಾಯತ್ ಗಳು ಸದಸ್ಯರ ಕ್ರಿಯಾಶೀಲತೆಯೊಂದಿಗೆ ಹಳ್ಳಿ‌ಸರ್ಕಾರದಂತೆ ಕಾರ್ಯನಿರ್ವಹಿಸಬೇಕು. ಇದಕ್ಕೆ ಪೂರಕವಾಗಿ ಜಾತಿ‌ಮತ್ತು ಆದಾಯ ಪ್ರಮಾಣ ಪತ್ರವನ್ನು ಗ್ರಾಮಮಟ್ಟದಲ್ಲಿಯೇ ವಿತರಿಸಲು ಕ್ರಮಕೈಗೊಳ್ಳಲಿದೆ ಎಂದರು.
ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮಪಂಚಾಯತ್ ಸದಸ್ಯರ ತರಬೇತಿಯನ್ನು ಎಲ್ಲಾ ಸದಸ್ಯರು ಪಡೆದುಕೊಂಡು ಕಾನೂನಿನ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯ ಎಂದವರು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಸದಸ್ಯ , ರೈತ ಮೋರ್ಛಾದ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಚುನಾಯಿತ ಸದಸ್ಯರು ಗ್ರಾಮಸ್ಥರ ನಿರೀಕ್ಷೆಗಳನ್ನು ಹುಸಿ ಮಾಡದೆ, ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಪಕ್ಷದ ಗೌರವವನ್ನೂ ಹೆಚ್ಚಿಸುವಂತೆ ಮನವಿ ಮಾಡಿದರು. ಕೃಷಿ ಕಾಯ್ದೆ ರೈತಪರವಾಗಿದೆ ಎನ್ನುವ ವಿಚಾರವನ್ನು ಕಾರ್ಯಕರ್ತರು ಮನೆಯ ಮನೆಗಳಿಗೆ ತಿಳಿಸುವ ಮೂಲಕ, ಬಿಜೆಪಿ ಸರ್ಕಾರದ ವಿರುದ್ಧ ನಡೆಯುವ ಷಡ್ಯಂತ್ರಗಳಿಗರ ಸೂಕ್ತ ಉತ್ತರ ಕೊಡುವಂತೆ ಅವರು ಕರೆ‌ ನೀಡಿದರು.

ವಿಧಾನಪರಿಷತ್ ಸದಸ್ಯ ಎಂ.ಎನ್. ರವಿಕುಮಾರ್ ಮಾತನಾಡಿ, ದಕ್ಷಿಣಕನ್ನಡದಲ್ಲಿ ಸಂಘಟನೆಯ ನಿಜವಾದ ಶಕ್ತಿಯ ದರ್ಶನವಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಬಿಜೆಪಿ ಅಪ್ ಡೇಟ್ ಪಾರ್ಟಿ ಎಂದ ಅವರು, ನರೇಂದ್ರ ಮೋದಿಯವರು, ವಿಶ್ವಕಂಡ ಏಕೈಕ ಅಪ್ಡೇಟ್ ಲೀಡರ್ ಎಂದವರು ಹೇಳಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಸಮಬಲವಿದ್ದ ಏಳೂ ಪಂಚಾಯತ್ ಗಳು ಸೇರಿದಂತೆ ಬಂಟ್ವಾಳ ಕ್ಷೇತ್ರದಲ್ಲಿ ಒಟ್ಟು 29 ಗ್ರಾಮಪಂಚಾಯತ್ ಗಳಲ್ಲಿ ಬಿಜೆಪಿ ಅಧಿಕಾರ‌ ನಡೆಸಲಿದೆ‌ ಎಂದರು.

ವೇದಿಕೆಯಲ್ಲಿ ಶಾಸಕರಾದ ಸಂಜೀವ ಮಠಂದೂರು, ಎಸ್.ಅಂಗಾರ, ಹರೀಶ್ ಪೂಂಜ, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಪ್ರತಾಪ ಸಿಂಹ ನಾಯಕ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ,
ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಭರತೇಶ್, ರಾಜೇಶ್, ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ, ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ,ಯೋಗಿಶ್ ಭಟ್, ಹರಿಕೃಷ್ಣ ಬಂಟ್ವಾಳ, ನಾಗರಾಜ ಶೆಟ್ಟಿ, ನಿತಿನ್ ಕುಮಾರ್,ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು.
ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.

More from the blog

ಭಾರೀ ಮಳೆ ಮುನ್ಸೂಚನೆ : ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 14ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,...

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...