ವಿಟ್ಲ: ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಾನಾ ಠಾಣೆಗಳಿಗೆ ವರ್ಗಾವಣೆಯಾಗಿರುವ ಸಿಬ್ಬಂದಿಗಳಿಗೆ ಭಾನುವಾರ ಠಾಣೆಯ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ವಿಟ್ಲ ಪೊಲೀಸ್ ಉಪನಿರೀಕ್ಷಕ ಯಲ್ಲಪ್ಪ ಮಾತನಾಡಿ ಕುಟುಂಬಕ್ಕಿಂತ ಹೆಚ್ಚಿನ ಸಮಯವನ್ನು ಸಾರ್ವಜನಿಕರ ರಕ್ಷಣೆಗೆ ತೊಡಗುವ ಪೊಲೀಸರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಕರ್ತವ್ಯದ ಅವಧಿಯಲ್ಲಿ ಮಾಡಿದ ಉತ್ತಮ ಕಾರ್‍ಯಗಳನ್ನು ಇಲಾಖೆ ಹಾಗೂ ಜನರು ಸದಾ ಸ್ಮರಿಸುತ್ತಾರೆ ಎಂದು ತಿಳಿಸಿದರು.
ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಪ್ರವೀಣ್ ಕುಮಾರ, ಪದ್ಮನಾಭ, ರಾಮಪ್ಪ, ರಮೇಶ್ ನಾಯ್ಕ, ಅಭಿಜಿತ್ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ಪೊಲೀಸ್ ಸಿಬ್ಬಂದಿಗಳಾದ ಸತೀಶ್ ಅನಿಸಿಕೆ ಹಂಚಿಕೊಂಡರು.
ವಿಟ್ಲ ಪೊಲೀಸ್ ಸಹಾಯಕ ಉಪನಿರೀಕ್ಷಕ ಧನಂಜಯ, ರವೀಶ್ ಉಪಸ್ಥಿತರಿದ್ದರು. ನವ್ಯ, ನೇಹ ಪ್ರಾರ್ಥಿಸಿದರು. ಪೊಲೀಸ್ ಸಿಬ್ಬಂದಿಗಳಾದ ಅನುಕುಮಾರ್ ಸ್ವಾಗತಿಸಿದರು. ವಿನೋದ್ ಕುಮಾರ್ ವಂದಿಸಿದರು. ದಿನೇಶ್ ಕಡಮಜಲು ಕಾರ್‍ಯಕ್ರಮ ನಿರೂಪಿಸಿದರು.

