Friday, July 11, 2025

ಟ್ರಾಫಿಕ್ ಎಸ್.ಐ.ಗೆ ಬೀಳ್ಕೋಡುಗೆ

ಬಂಟ್ವಾಳ: ಮೆಲ್ಕಾರ್ ಸಂಚಾರಿ ಠಾಣಾ ಎಸ್.ಐ. ನಾರಾಯಣ ರೈ  ಅವರು ವಯೋನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಮೆಲ್ಕಾರ್ ಟ್ರಾಫಿಕ್ ಠಾಣಾ ವತಿಯಿಂದ ಪಾಣೆಮಂಗಳೂರು ಸುಮಂಗಲ ಕಲ್ಯಾಣ ಮಂಟಪ ದಲ್ಲಿ ಬೀಳ್ಕೋಡುಗೆ ಕಾರ್ಯಕ್ರಮ ನಡೆಯಿತು.
34 ವರ್ಷ ಎರಡು ದಿನಗಳ ಕಾಲ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಎಸ್.ಐ.ಆಗಿ ಪದೋನ್ನತಿ ಹೊಂದಿ ನಿವೃತ್ತಿ ಹೊಂದಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಪೋಲೀಸ್ ಅಧೀಕ್ಷಕರು ವಿಕ್ರಂ ಅಮ್ಟೆ ಮಾತನಾಡಿ ಸುದೀರ್ಘ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದಿರುವುದು ಇಲಾಖೆಗೆ ಗೌರವ ತಂದಿದೆ.
ಇವರ ಕಾರ್ಯವೈಖರಿ ಯುವಕರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು. ‌
ಮುಖ್ಯ ಅತಿಥಿಯಾಗಿ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ ಅವರು ಮಾತನಾಡಿ ಯುವಕರಿಗೆ ಇಂತಹ ಹಿರಿಯ ಅಧಿಕಾರಿಗಳು ಆದರ್ಶ ವಾಗಿದ್ದಾರೆ ಎಂದರು.
ವೇದಿಕೆಯಲ್ಲಿ ಪ್ರೋ.ಡಿ.ವೈ..ಎಸ್.ಪಿ.ಗೋವಿಂದ ರಾಜು, ಸಂಚಾರಿ ಪೋಲೀಸ್ ಠಾಣಾ ಎಸ್. ಐ. ಮಂಜುನಾಥ್, ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್.ಐ.ಸುಧಾಕರ ತೋನ್ಸೆ, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ವಿಟ್ಲ ಎಸ್.ಐ.ಯಲ್ಲಪ್ಪ ಎಸ್. ಹಾಗೂ ಸಿಬ್ಬಂದಿ ಗಳು ಉಪಸ್ಥಿತರಿದ್ದರು. ‌
ಮೆಲ್ಕಾರ್ ಸಂಚಾರಿ ಪೋಲೀಸ್ ಠಾಣಾ ಎಸ್. ಐ.ಮಂಜುನಾಥ್ ಸ್ವಾಗತಿಸಿ , ಪೋಲೀಸ್ ಸಿಬ್ಬಂದಿ ವಿವೇಕ್ ವಂದಿಸಿದರು. ‌

More from the blog

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ : ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ನಿರ್ದೇಶನ..

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ‌ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ...