ಬಂಟ್ವಾಳ: ಆರೋಗ್ಯ ಇಲಾಖೆಯಲ್ಲಿ ಸುಮಾರು 37 ವರ್ಷಗಳ ಕಾಲ ಹಿರಿಯ ಮಹಿಳಾ ಸಹಾಯಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಕೇಪು ನಿವಾಸಿ ಎ.ಎಮ್ .ಲೀಲಾವತಿ ಅವರ ಬೀಳ್ಕೊಡುಗೆ ಕಾರ್ಯಕ್ರಮ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಲೀಲಾವತಿ ಅವರು ನಿವೃತ್ತ ಎ.ಎಸ್.ಐ.ಕೇಪು ಗೌಡ ಅವರ ಧರ್ಮ ಪತ್ನಿ.


ಇವರು ತಣ್ಣೀರು ಪಂತ, ವೀರಕಂಭ, ವಾಮದಪದವು, ಹಾಗೂ ವಿಟ್ಲ ದ ಆರೋಗ್ಯ ಕೇಂದ್ರ ದಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ| ಪ್ರಶಾಂತ್, ಡಾ| ವೇದಾವತಿ, ಕೇಪುಗೌಡ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.