ಬಂಟ್ವಾಳ: ನೇರಳಕಟ್ಟೆ ವ್ಯವಸಾಯಿಕ ಸಹಕಾರಿ ಸಂಘದ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿ ವೃತ್ತಿಯಿಂದ ವಯೋನಿವೃತ್ತಿ ಹೊಂದಿದ ದಿನಕರ್ ನಾಯಕ್ ನೇರಳಕಟ್ಟೆ ಅವರ ಬೀಳ್ಕೊಡುಗೆ ಕಾರ್ಯಕ್ರಮ ಬಿಸಿರೋಡಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣ ದಲ್ಲಿ ನಡೆಯಿತು.
ಕಳೆದ 41 ವರ್ಷಗಳಿಂದ ನೇರಳಕಟ್ಟೆ ಸಹಕಾರಿ ಬ್ಯಾಂಕ್ ನಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಸಿ ಪ್ರಾಮಾಣಿಕ ಸೇವೆಯನ್ನು
ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಜಾರಾಂ ಭಟ್ ಅವರ ಅಧ್ಯಕ್ಷ ತೆಯಲ್ಲಿ ಬಿಸಿರೋಡಿನ ಡಿ.ಸಿ.ಸಿ.ಬ್ಯಾಂಕ್ ನ ಸಭಾಂಗಣ ದಲ್ಲಿ ಬಂಟ್ವಾಳ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಒಕ್ಕೂಟದ ವತಿಯಿಂದ ವಿದಾಯ ಕೂಟ ನಡೆಯಿತು.
ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಭಂದಕ ಡಾ| ಸುರೇಶ್ ಗೌಡ, ಸಹಾಯಕ ನಿಭಂದಕ ಮಂಜುನಾಥ್ ಸಿಂಗ್, ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್, ಬಿಸಿರೋಡ್ ಡಿ.ಸಿ.ಸಿ.ಬ್ಯಾಂಕ್ ಮ್ಯಾನೇಜರ್ ಸೌಮ್ಯ, ಸಹಕಾರ ಸಂಘಗಳ ಬಂಟ್ವಾಳ ತಾಲೂಕು ವಲಯ ಮೇಲ್ವಿಚಾರಕ ರಾದ ಕೇಶವ ಕಿಣಿ, ಯೋಗೀಶ್ , ಒಕ್ಕೂಟದ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಈಶ್ವರ ನಾಯ್ಕ, ಉಪಾಧ್ಯಕ್ಷ ಆಲ್ಬರ್ಟ್ ಡಿಸೋಜ ಹಾಗೂ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಉಪಸ್ಥಿತರಿದ್ದರು.