ಬಂಟ್ವಾಳ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಆಶ್ರಯದಲ್ಲಿ 12ನೇ ವರ್ಷದ ಕೊರಗರ “ಭೂಮಿ ಹಬ್ಬ” ಕಾರ್ಯಕ್ರಮವು ಆ.19 ರಂದು ಬಿ.ಸಿ.ರೋಡಿನಲ್ಲಿರುವ ಕುಲಾಲಭವನದಲ್ಲಿ ನಡೆಯಲಿದೆ. ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಸಚಿವ ರಮಾನಾಥ ರೈ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಒಕ್ಕೂಟದ ಅಧ್ಯಕ್ಷ ಅಮ್ಮಣ್ಣಿ ಕೊರಗ ಬೆಳ್ವೆ ಅಧ್ಯಕ್ಷತೆ ವಹಿಸುವರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸೆಲ್ವಮಣಿ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಡಾ.ಬಿ.ಎಸ್.ಹೆರಮಲತಾ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷೆ ಶಕುಂತಳಾ ನೇಜಾರು, ಒಕ್ಕೂಟದ ಗೌರವಾಧ್ಯಕ್ಷ ಗೋಕುಲ್ ದಾಸ್, ಒಕ್ಕೂಟದ ಬಂಟ್ವಾಳ ಘಟಕದ ಅಧ್ಯಕ್ಷ ಸಂಜೀವ ಮಂಗಿಲಪದವು ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಸಂದರ್ಭದಲ್ಲಿ ಎಂಪಿಲ್ ಪಧವೀಧರೆ ಮೀನಾಕ್ಷಿ ಬೊಡ್ಡೋಡಿ ಅವರನ್ನು ಸನ್ಮಾನಿಸಲಾಗುವುದು ಸಮುದಾಯದ ಮುಖಂಡರಾದ ಮೋಹನ್ ಅಡ್ಡೆ ಮತ್ತು ಗೌರಿ ಕೆಂಜೂರು ಹಬ್ಬದ ಸಂದೇಶ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
