ವಿಟ್ಲ: ವಿಟ್ಲ ಪಾರ್ಥಂಪಾಡಿ (ಜಠಾಧಾರಿ) ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಪ್ರಕ್ರಿಯೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ವೀಕ್ಷಿಸಿದರು. ವಿಟ್ಲ ಪ.ಪಂ.ಉಪಾಧ್ಯಕ್ಷ ಜಯಂತ ನಾಯ್ಕ, ಜೀರ್ಣೋದ್ಧಾರ ಸಮಿತಿ ಕಾರ್‍ಯಾಧ್ಯಕ್ಷ ಬಾಬು ಕೆ.ವಿ., ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ದಂಬೆಕಾನ, ಕಾರ್‍ಯದರ್ಶಿ ವಿ.ಶೈಲೇಶ್, ಉಪಾಧ್ಯಕ್ಷರಾದ ಲಕ್ಷ್ಮಣ ಆರ್.ಎಸ್., ಕಾಶಿಮಠ ಶ್ರೀ ಕಾಶಿ ಯುವಕ ಮಂಡಲ ಅಧ್ಯಕ್ಷ ಕೇಶವ ಮತ್ತಿತರರು ಉಪಸ್ಥಿತರಿದ್ದರು.

