ಬಂಟ್ವಾಳ: ಪಕ್ಷ ನಿರಂತರವಾಗಿ ಅಧಿಕಾರಕ್ಕೆ ಬರುವಂತೆ ಮಾಡಲು , ಕಾರ್ಯಕರ್ತರ ನೇತೃತ್ವದಲ್ಲಿ ಪಕ್ಷ ಸಂಘಟನಾತ್ಮಕ ವಾಗಿ ಬೆಳೆಯಲು ಪೂರಕವಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

ಕಾರ್ಯಕರ್ತರಿಗೆ ಗೌರವ ನೀಡುವ, ಚಿಂತನೆಗೆ ಶಕ್ತಿ ತುಂಬುವ ಸಲುವಾಗಿ ಬೂತ್ ಅಧ್ಯಕ್ಷ ರ ಮನೆಗೆ ಬೇಟಿ ನೀಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಕರ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ 6 ಬೂತ್ ಅಧ್ಯಕ್ಷರುಗಳ ಮನೆಗೆ ಬೇಟಿ ನೀಡಿ, ನಾಮಫಲಕ ಅನಾವರಣ ಮಾಡಿದ ಬಳಿಕ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದ ಮೂಲಕ ಗ್ರಾಮದ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಮತ್ತು ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ, ಎಲ್ಲಾ ಸಮಸ್ಯೆ ಗಳನ್ನು ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮುಂದಿನ ಪ್ರತಿ ಚುನಾವಣೆಯಲ್ಲಿ ಎಲ್ಲಾ ಮತದಾರರು ಬಿಜೆಪಿ ಮತದಾರರಾಗಿ ಬದಲಾವಣೆ ಮಾಡುವ ಪ್ರಮುಖವಾದ ಕೆಲಸ ಕಾರ್ಯಕರ್ತರ ನೇತೃತ್ವದಲ್ಲಿ ನಡೆಯಬೇಕಾಗಿದೆ.
ತಾಂತ್ರಿಕ, ಶಿಕ್ಷಣ, ಮಿಲಿಟರಿ ವ್ಯವಸ್ಥೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿ ಶಕ್ತವಾದ ಭಾರತದ ನಿರ್ಮಾಣ ಮಾಡಿ ಜಗತ್ತು ಮೆಚ್ಚಿದ ನಾಯಕ ನಾಗಿ ಮೋದಿಯವರು ಮಿಂಚುತ್ತಿದ್ದಾರೆ ಎಂದು ಅವರು ಹೇಳಿದರು.
ಭಾರತದ ಸಂಸ್ಕೃತಿ , ಧರ್ಮ , ಪದ್ಧತಿಯ ಬಗ್ಗೆ ವಿದೇಶಗಳು ಅನುಕರಣೆ ಮಾಡುತ್ತಿದೆ, ಇದು ಭಾರತದ ವೈಶಿಷ್ಟ್ಯ ಎಂದರು.ಇಂತಹ ವೈಶಿಷ್ಟ್ಯ ಪೂರ್ಣ ವಾದ ಭಾರತದ ಸಂಸ್ಕೃತಿ ಗಳು ಉಳಿಯಬೇಕಾದರೆ ಬಿಜೆಪಿ ಅಧಿಕಾರಕ್ಕೆ ನಿರಂತರವಾಗಿ ಬರಬೇಕು ಎಂದರು.
ಕಳೆದ ಮೂವತ್ತು ವರ್ಷಗಳಿಂದ ಉದ್ದೇಶಪೂರ್ವಕವಾಗಿ ಅಭಿವೃದ್ದಿ ಕಾಣದೆ ಉಳಿದಿರುವ ಬಿಜೆಪಿ ಬೂತ್ ಗಳ ಅಭಿವೃದ್ಧಿ ಕಾರ್ಯ ಹಾಗೂ ಧಾರ್ಮಿಕ ಕೇಂದ್ರಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಮೂಲಧರ್ಮವಾಗಿದೆ.
ಕರ್ಪೆ ಗ್ರಾಮದ ಬೂತ್ ಸಂಖ್ಯೆ 1 ರ ಅಧ್ಯಕ್ಷ ತೇಜಸ್ ಪೂಜಾರಿ ಮರ್ದೊಟ್ಟು, ಕರ್ಪೆ ಗ್ರಾಮದ ಬೂತ್ ಸಂಖ್ಯೆ 2 ರ ಅಧ್ಯಕ್ಷ ನವೀನ್ ಪೂಜಾರಿ ಹೊಸವಕ್ಲು,
ಸಂಗಬೆಟ್ಟು ಗ್ರಾಮದ ಬೂತ್ ಸಂಖ್ಯೆ 3 ರ ಅಧ್ಯಕ್ಷ ಉಮೇಶ್ ಗೌಡ ಮೊಯಿಲ್ಬೆಟ್ಟು, ಸಂಗಬೆಟ್ಟು ಗ್ರಾಮದ ಬೂತ್ ಸಂಖ್ಯೆ 4 ರ ಅಧ್ಯಕ್ಷ ಶರತ್ ಮೇಲುಗುಡ್ಡೆ, ಸಂಗಬೆಟ್ಟು ಗ್ರಾಮದ ಬೂತ್ ಸಂಖ್ಯೆ 5 ರ ಅಧ್ಯಕ್ಷ ದಾಮೋದರ ಪೂಜಾರಿ ಪಳ್ಳೇದಕಾಡು, ಸಂಗಬೆಟ್ಟು ಗ್ರಾಮದ ಬೂತ್ ಸಂಖ್ಯೆ 6 ರ ಅಧ್ಯಕ್ಷ ವಿನೋದ್ ಅಡಪರ ಮನೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಹಾಗೂ ಬಂಟ್ವಾಳ ಬಿಜೆಪಿ ಮಂಡಲದ ಪದಾಧಿಕಾರಿಗಳು ಬೂತ್ ಅಧ್ಯಕ್ಷ ರುಗಳ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡಲಾಯಿತು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಕಾರ್ಯಕರ್ತರಿಗೆ ವಿಶೇಷ ಜವಬ್ದಾರಿ ನೀಡುವ ರಾಜ್ಯದ ಕಾರ್ಯಕ್ರಮ ಇದಾಗಿದ್ದು, ಸಂಘಟನಾತ್ಮಕವಾಗಿ ಬಲಿಷ್ಟ ವಾಗಲು ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಅವರು ತಿಳಿಸಿದರು.
ಹಿರಿಯ ನಾಯಕರ ಪಕ್ಷ ತತ್ವ ಸಿದ್ದಾಂತದ ಅಡಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದೆ ಎಂದರು.
ಬಂಟ್ವಾಳ ತಾಲೂಕಿನಲ್ಲಿ ಡಯಾಲಿಸ್ ವ್ಯವಸ್ಥೆ, ಆಕ್ಸಿಜನ್ ಘಟಕ, ಐಸಿಯು ಬಸ್, ಹೀಗೆ ಅನೇಕ ಜನಪರ ಯೋಜನೆಗಳನ್ನು ಶಾಸಕರ ನೇತ್ರತ್ವದಲ್ಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ರಮನಾಥ ರಾಯಿ, ಮಾಜಿ ತಾ.ಪಂ.ಸದಸ್ಯಪ್ರಭಾಕರ ಪ್ರಭು, ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ, ಉಪಾಧ್ಯಕ್ಷ ವಿಮಲ ಮೋಹನ್, ಗ್ರಾ.ಪಂ.ಸದಸ್ಯ ರಾದ ಪ್ರೇಮ ಪೂಜಾರಿ, ಸುನಿಲ್ ಶೆಟ್ಟಿ ಗಾರ್, ಸಂದೇಶ್ ಶೆಟ್ಟಿ, ಶಾಂತ, ಶಕುಂತಲಾ, ಸುರೇಶ್ ಕುಲಾಲ್, ಉದಯ ,ದಾಮೋದರ, ರಾಜೀವಿ, ಹೇಮಲತಾ, ವಿದ್ಯಾಪ್ರಭು, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ,
ಪ್ರಮುಖ ರಾದ ರತ್ನಕುಮಾರ್ ಚೌಟ ಜಯರಾಮ ಅಡಪ, ಸಂತೋಷ ಕುಮಾರ್ ರಾಯಿಬೆಟ್ಟು, ದೀಪಕ್ ಶೆಟ್ಟಿ ಗಾರ್ , ಎಸ್.ಪಿ.ಶ್ರೀಧರ್, ಉಮೇಶ್ ಗೌಡ, ಪ್ರಪುಲ್ ರೈ, ದಿನೇಶ್ ಶೆಟ್ಟಿ ದಂಬೆದಾರ್ , ಯೋಗೀಶ್ ಆಚಾರ್ಯ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ವೀರಭದ್ರ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕ ರಾಜೇಶ್ ನಾಯ್ಕ್ ಅವರನ್ನು ಸನಾತನ ಧರ್ಮದ ಪ್ರಕಾರ ಕೈ ಕಾಲು ತೊಳೆಯಲು ನೀರು ನೀಡಿ , ಬಳಿಕ ಅರತಿ ಬೆಳಗಿ ,ಹಣೆಗೆ ಕುಂಕುಮ ಹಚ್ಚಿ ಸ್ವಾಗತಿಸಿ ದರು.
ಬ್ಯಾಂಡ್ ವಾದ್ಯ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತ್ತು.
ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.
ಕರ್ಪೆ, ಗುತ್ತಿಗೆಬಳ್ಳಿ ರಸ್ತೆ ಮೂಲಕ ರಾಯಿ ಸಂಪರ್ಕವನ್ನು ಮಾಡುವ ರಸ್ತೆ ಕಾಂಕ್ರೀಟ್ ಗೆ 6ಕೋಟಿ 80 ಲಕ್ಷ ಅನುದಾನ ಒದಗಿಸಿದ ಶಾಸಕ ರಾಜೇಶ್ ನಾಯ್ಕ್ ಅವರನ್ನು ಕರ್ಪೆ ಯಲ್ಲಿ ಅಭಿನಂದಿಸಿದರು.

