ಬಂಟ್ವಾಳ: ವಿದ್ಯುತ್ ಸಂಪರ್ಕ ವಂಚಿತ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಗಿರಿಜಾ ಅವರ ಮನೆಗೆ ಎಸ್ಡಿಪಿಐ ಬಂಟ್ವಾಳ ನಿಯೋಗವು ಬುಧವಾರ ಭೇಟಿ ನೀಡಿತು.
ಗಿರಿಜಾ ಅವರ ದಾಖಲೆ ಪತ್ರಗಳು ಪರಿಶೀಲನೆ ನಡೆಸಿ, ವಿದ್ಯುತ್ ಸಂಪರ್ಕಕ್ಕಾಗಿ ಕಾನೂನಾತ್ಮವಾಗಿ ಹೋರಾಟ ನಡೆಸಿ ಸಂಪರ್ಕ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಯುಸುಫ್ ಆಲಡ್ಕ, ಬಂಟ್ವಾಳ ಪುರಸಭೆ ಸದಸ್ಯರಾದ ಮುನೀಶ್ ಅಲಿ,
ಇದ್ರೀಸ್ ಪಿ.ಜೆ., ಮಂಚಿ ಹೋರಾಟ ಸಮಿತಿ ಅಧ್ಯಕ್ಷ ನವಾಜ್ ಕೋಡಿಬೈಲ್, ಮಂಚಿ ವಲಯ ಸಮಿತಿ ಅಧ್ಯಕ್ಷ ಫೈಝಲ್ ಮಂಚಿ, ಶರೀಫ್ ಕುಕ್ಕಾಜೆ, ಇರ್ಷಾದ್ ಕುಕ್ಕಾಜೆ ನೌಫಲ್ ಹಾಜರಿದ್ದರು.