ಧರ್ಮಸ್ಥಳ: ಸಮಾಜ ದಯಾ ವೈಯುಕ್ತಿಕ ಅಭಿವೃದ್ಧಿಯು ಒಮ್ಮೆಲೆ ಆಗುವಂತಹುದಲ್ಲ, ಸುಸ್ಥಿರತೆಯ ಜೊತೆಗೆ ಗುರಿಸಾಧನೆಗಳನ್ನು ಈಡೇರಿಸಿಕೊಳ್ಳುವ ದಾರಿಯಲ್ಲಿ ಮುನ್ನೆಡೆದಲ್ಲಿ ಮಾತ್ರ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಗ್ರಾಮಾಭಿವೃದ್ಧಿ ಯೋಜನೆಗೆ ಭೇಟಿ ನೀಡಿದ ಬಿಹಾರದ ಎಸ್.ಆರ್.ಎಲ್.ಎಂ ((State Rural Livelihood mission) ) ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್.ಮಂಜುನಾಥ್‌ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬೆಳೆದು ಬಂದ ಹಾದಿ ಹಾಗೂ ಕಾರ್ಯವೈಖರಿಯನ್ನು ವಿವರಿಸಿದರು.
ಬಿಹಾರದ ಎಸ್.ಆರ್.ಎಲ್.ಎಂ ಅಧಿಕಾರಿಗಳ ತಂಡವು ಫೆ.6 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಳ, ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರಕಚೇರಿ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ರುಡ್‌ಸೆಟ್, ಸ್ವ-ಸಹಾಯ ಸಂಘಗಳ ಭೇಟಿ, ನಗದು ಸಂಗ್ರಹಣಾ ಕೇಂದ್ರಗಳನ್ನು ಭೇಟಿ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.

