ಸೇವೆಯ ಮನೋಭಾವ ನಮ್ಮ ಉಸಿರಾಗಬೇಕು: ಡಾ l ಪ್ರಭಾಕರ್ ಭಟ್ ಕಲ್ಲಡ್ಕ.    

 

ಶ್ರೀರಾಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ l ಪ್ರಭಾಕರ್ ಭಟ್ ಕಲ್ಲಡ್ಕ ರಾಷ್ಟ್ರ ಸೇವೆಯ ಪರಿಕಲ್ಪನೆ ಯುವ ಸಮುದಾಯದಲ್ಲಿ ಜಾಗೃತ ವಾಗಬೇಕು ಅದಕ್ಕಾಗಿ ಇಂಥಹ ಶಿಬಿರಗಳು ಅಗತ್ಯವಿದೆ, ಸೇವಾ ಮನೋಭಾವ ನಮ್ಮ ಉಸಿರಾಗಬೇಕು ಎಂದರು.  ಸಮಾರೋಪ ಭಾಷಣ ಮಾಡಿದ ಕರ್ನಾಟಕ  ಸರ್ಕಾರ ಧಾರ್ಮಿಕ ಪರಿಷತ್ ಸದಸ್ಯರರಾಗಿರುವ ಕಶೆ ಕೋಡಿ ಸೂರ್ಯನಾರಾಯಣ ಭಟ್ ಶಿಬಿರದ ಸಾರ್ಥಕತೆ ವಿದ್ಯಾರ್ಥಿಗಳ ಅನುಭವದಲ್ಲಿದೆ,ಬೆರೆತು ಕಲಿತ ವಿದ್ಯೆ ಜೀವನಕ್ಕೆ ದಾರಿ ದೀಪ ಎಂದರು. ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ,ರಾಷ್ಟ್ರ ಪ್ರಶಸ್ತಿ ವಿಜೇತ ರಮೇಶ್ ನಾಯಕ್, ರಾಯಿ ಪಂಚಾಯಿತಿ ಯ ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ, ಪದವಿ ವಿಭಾಗದ ಪ್ರಾಂಶುಪಾಲ ಕೃಷ್ಣಪ್ರಸಾದ್,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರದೀಪ್ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಗೌಡ ಮಿಯಾಲು, ಚಂದ್ರಶೇಖರ್ ಗೌಡ ಕಾರಂಬಡೆ, ಪರಮೇಶ್ವರ ಪೂಜಾರಿ ರಾಯಿ,ಮುಖ್ಯೋಪಾಧ್ಯಾರಾದ ಜಯರಾಮ್ ಪಡ್ರೆ, ಶಿಬಿರಾಧಿಕಾರಿ ಯತಿರಾಜ್ ಪಿ ಮತ್ತು ದೀಕ್ಷಿತಾ, ಸುಕನ್ಯಾ ಉಪಸ್ಥಿತರಿದ್ದರು.