Thursday, July 10, 2025

ಅಗತ್ಯವಿರದ ಅಂಗಡಿಗಳನ್ನು ಬಂದ್ ಮಾಡಿ, ರಿಕ್ಷಾ ಚಾಲಕರು ಮನೆಗೆ ತೆರಳಿ, ರಸ್ತೆಯಲ್ಲಿ ಅನಾವಶ್ಯಕ ತಿರುಗಾಟ ಬೇಡ: ನಗರ ಠಾಣಾ ಎಸ್. ಐ.ಅವಿನಾಶ್ ಧ್ವನಿವರ್ಧಕದಲ್ಲಿ ಎಚ್ಚರಿಕೆ

ತಹಶೀಲ್ದಾರ್ ರಶ್ಮಿ ಎಸ್. ಆರ್.ನೇತ್ರತ್ವದಲ್ಲಿ ಬಂಟ್ವಾಳ ವೃತ್ತ ದ ಪೋಲೀಸರು ಅಂಗಡಿಗಳನ್ನು ಬಂದ್ ಮಾಡುವಂತೆ ಧ್ವನಿವರ್ಧಕ ದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.
ಬಂಟ್ವಾಳ, ಬಿಸಿರೋಡು , ಪರಂಗಿಪೇಟೆ, ಕೈಕಂಬ, ವಿಟ್ಲ, ಕಲ್ಲಡ್ಕ ಸೇರಿದಂತೆ ಎಲ್ಲಾ ಪೇಟೆ ಗಳನ್ನು ಸಂಪೂರ್ಣ ಬಂದ್ ಮಾಡಲು ಅವರು ಧ್ವನಿ ವರ್ಧಕ ಬಳಸಿದ್ದಾರೆ

ಬಂಟ್ವಾಳ: ಕೊರೊನಾ ವೈರಸ್‌ ಭೀತಿ ಹಿನ್ನಲೆಯಲ್ಲಿ ಅಂಗಡಿಗಳನ್ನು ಬಂದ್ ಮಾಡುವಂತೆ, ಜನರು ಮನೆಯಲ್ಲಿಯೇ ಇರುವಂತೆ, ರಸ್ತೆಯಲ್ಲಿ ತಿರುಗಾಡದಂತೆ ಧ್ವನಿವರ್ಧಕದ ಮೂಲಕ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಹೆಚ್ ಅವರು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
ಅವರು ಬಿಸಿರೋಡು, ಬಂಟ್ವಾಳ, ಕೈಕಂಬ ಸೇರಿದಂತೆ ಜನರು ಗುಂಪಾಗಿ ಸೇರುವ ಕಡೆಗಳಲ್ಲಿ ಈ ಪ್ರಯತ್ನದ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಅಂಗಡಿಗಳ ಹೊರತು ಬೇರೆ ಅಂಗಡಿಗಳನ್ನು ಮುಚ್ಚಿ ಜಾಗ್ರತೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

 

ವಾಹನಗಳೂ ಸಂಚಾರ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದು, ಈ ಆದೇಶಕ್ಕೆ ಕ್ಯಾರೇ ಅನ್ನದ ಆಟೋ ಚಾಲಕರು ಆಟೋ ಚಲಾಯಿಸುತ್ತಿದ್ದು, ಪೊಲೀಸರು ಆಟೋ ಚಾಲಕರಿಗೆ ಮನವಿ ಮಾಡಿ ಮನೆಯ ಕಡೆ ತೆರಳುವಂತೆ ವಿನಂತಿ ಮಾಡುತ್ತಿದ್ದಾರೆ.

ನಗರದ ಹಲವು ಭಾಗಗಳಲ್ಲಿ ಪೊಲೀಸರು ಜನಜಾಗೃತಿ ಮಾಡುವ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು, ವಾಹನ ಸವಾರರು ರಸ್ತೆಗಿಳಿಯದಂತೆ ಮನವಿ ಮಾಡಿದ್ದು, 144 ಸೆಕ್ಷನ್ ಜಾರಿಯಿರುವ ಬಗ್ಗೆ ಎಚ್ಚರಿಸುತ್ತಿದ್ದಾರೆ. ಆದರೆ ಪೊಲೀಸರ ಮನವಿಗೂ ಕಿವಿಗೊಡದ ಸಾರ್ವಜನಿಕರು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಕೆಲವು ಅಂಗಡಿಗಳು ಇನ್ನೂ ತೆರದಿವೆ.

ಬಿ.ಸಿ. ರೋಡು ಬಹುತೇಕ ಅಂಗಡಿಗಳು ಮುಂಜಾನೆಯಿಂದಲೇ ಬಂದ್ ಅಗಿತ್ತು. ಅದರೆ 10 ಗಂಟೆ ಬಳಿಕ ಕೆಲವೊಂದು ಅಂಗಡಿಗಳು ತೆರೆಯಲ್ಪಟ್ಟಿತು. ಹಾಗಾಗಿ ಜನರು ಸೇರತೊಡಗಿದರು. ಆ ಸಂದರ್ಭ ಪೋಲೀಸರು ಎಚ್ಚರ ನೀಡುವ ಕೆಲಸ ಮಾಡಿದರು.

ಬಸ್ ಇಲ್ಲದೆ, ಜನರು ಇಲ್ಲದೆ ಬಿಕೋ ಎನ್ನುತ್ತಿರುವ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣ. ಸರಕಾರದ ಆದೇಶದಂತೆ ಸರಕಾರಿ ಹಾಗೂ ಖಾಸಗಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಹಾಗಾಗಿ ಬಸ್ ನಿಲ್ದಾಣ ಖಾಲಿಯಾಗಿತ್ತು.

More from the blog

B. C Road : ಹೃದಯಾಘಾತದಿಂದ ಅವಿವಾಹಿತ ಯುವಕ ಸಾವು..

ಬಂಟ್ವಾಳ: ಹೃದಯಾಘಾತದಿಂದ ಸಾವನ್ನಪ್ಪುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದ್ದು, ಒಂದಷ್ಟು ಸುದ್ದಿಯಾಗುತ್ತಿರುವಾಗಲೇ ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ರಾಜಸ್ಥಾನ ಮೂಲದ ನಟವರ್ ಸಿಂಗ್ (27) ಮೃತಪಟ್ಟ ಯುವಕ. ಬಿಸಿರೋಡಿನ ಹೃದಯಭಾಗದಲ್ಲಿ...

Guru Purnima : ಭಾರತೀಯ ಜನತಾ ಪಾರ್ಟಿ ವತಿಯಿಂದ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಜುಲೈ 10 ಗುರುವಾರ ಗುರುಪೂರ್ಣಿಮೆಯಂದು, ಭಾರತೀಯ ಜನತಾ ಪಾರ್ಟಿ ವತಿಯಿಂದ 117ನೇ ಬೂತ್ ನಲ್ಲಿ ಗುರುಗಳನ್ನು ಗುರುತಿಸಿ ಅವರ ಮನೆಗೆ ಹೋಗಿ ಗೌರವಿಸುವ ಗುರುವಂದನಾ ಕಾರ್ಯಕ್ರಮ ನಡೆಯಿತು. ಎಲಬೆ ಪೂವಪ್ಪ ಪೂಜಾರಿಯವರ...

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮುಂದಿನ ಅಧಿವೇಶನದಲ್ಲೇ ಮಸೂದೆ : ಗೃಹ ಸಚಿವ ಜಿ. ಪರಮೇಶ್ವರ್..

ಮಂಗಳೂರು : ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಹಿನ್ನಲೆಯಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಮುಂದಿನ ಅಧಿವೇಶನದಲ್ಲಿ ಮಸೂದೆ...

ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ – ದಿನೇಶ್ ಗುಂಡೂರಾವ್.. 

ಮಂಗಳೂರು : ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದುಎಂದು ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅವರು...