Tuesday, July 15, 2025

ಪ್ರಧಾನಿ ಮೋದಿ ಅವರ 71 ನೇ ಹುಟ್ಟು ಹಬ್ಬವನ್ನು ಬಿಸಿರೋಡಿನ ರಕ್ತೇಶ್ವರಿ ದೇವಿಗೆ ಭಜನೆ ಸೇವೆಯನ್ನು ಸಮರ್ಪಣೆ ಮಾಡಿ ವಿಶೇಷ ರೀತಿಯಲ್ಲಿ ಆಚರಣೆ ಪೊಳಲಿ ಭಜನಾ ತಂಡದ ಜೊತೆ ಕುಳಿತು ಭಜನೆ ಹಾಡಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ- ಬಂಟ್ವಾಳ ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 71 ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಕಾರ್ಯಕ್ರಮ ದ ಅಂಗವಾಗಿ ಸೆ.26 ರಂದು ಆದಿತ್ಯವಾರ ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಬಿಸಿರೋಡು ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ದಲ್ಲಿ ಭಜನಾ ಸೇವೆ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮಕ್ಕೆ ಶಾಸಕಾಂಗವು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಬಳಿಕ ಶಾಸಕರು ಭಜನಾ ತಾಳವನ್ನು ತಂಡದ ಮುಖ್ಯಸ್ಥ ರಿಗೆ ಹಸ್ತಾಂತರ ಮಾಡಿದರು.

ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೊಳಲಿ ರಾಜರಾಜೇಶ್ವರಿ ಭಜನಾ ತಂಡದ ಜೊತೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಭಜನೆ ಹಾಡಿದರು. ಈ ತಂಡದ ಭಜನೆಯ ನಿಗದಿತ ಸಮಯದವರೆಗೂ ಸುಮಾರು ಒಂದುವರೆ ತಾಸುವರೆಗೆ ಶಾಸಕರು ಭಜನೆಯನ್ನು ಹಾಡಿದರು.

ಪ್ರಾತಃಕಾಲ 6 ಗಂಟೆಗೆ ಸರಿಯಾಗಿ ಭಜನಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 8 ನೂತನ ಮಹಾಶಕ್ತಿ ಕೇಂದ್ರ ಗಳ ಆಯ್ದ ಭಜನಾ ತಂಡಗಳು ಈ ಅಖಂಡ ಭಜನಾ ಸೇವೆಯಲ್ಲಿ ಭಾಗವಹಿಸಿದವು.

ಆರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಶ್ರೀ ರಕ್ತೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ಮೋದಿಯವರ ಆರೋಗ್ಯಕ್ಕೆ ರಕ್ಷಣೆ ನೀಡಲಿ, ಅಧಿಕಾರತ್ವ ಇನ್ನಷ್ಟು ಬಲಿಷ್ಟ ವಾಗಲಿ ಎಂದು ದೇವರಿಗೆ ಪೂಜೆ ಸಲ್ಲಿಸಿ ದರು.

ಭಜನಾ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ಗಳಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸೀತಾರಾಮ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಯುಮೋರ್ಚಾ ಅಧ್ಯಕ್ಷ ಪ್ತದೀಪ್ ಅಜ್ಜಿಬೆಟ್ಟು, ಬಂಟ್ವಾಳ ಬಿಜೆಪಿ ಕೋಶಾಧಿಕಾರಿ ಪ್ರಕಾಶ್ ಅಂಚನ್, ಪ್ರಮುಖರದ ಗೋಪಾಲ ಸುವರ್ಣ, ಜನಾರ್ದನ ಬೊಂಡಾಲ, ವೆಂಕಟೇಶ ನಾವುಡ ಪೊಳಲಿ ಉಮೇಶ್ ಪೂಜಾರಿ ಅರಳ , ಮನೋಜ್ ಕಳ್ಳಿಗೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರಕುಶಲ ವಸ್ತುಗಳ ಮಳಿಗೆ , ನಮೋ ಆ್ಯಪ್, ನಮೋ ಟಿ ಸ್ಟಾಲ್, ಗಳಿಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು.

More from the blog

ಒಡಿಯೂರು ಶ್ರೀ ಜನ್ಮದಿನೋತ್ಸವ ಸೇವಾ ಸಂಭ್ರಮದ ಅಂಗವಾಗಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

ವಿಟ್ಲ : ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಬದುಕಿನ ಉತ್ತುಂಗಕ್ಕೆ ಕಾರಣವಾಗುತ್ತದೆ. ಬದುಕು ಪೂರ್ತಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಋತುವಿಗನುಗುಣವಾಗಿ ಹಿತ, ಮಿತ ಆಹಾರ ಸೇವಿಸಿದಾಗ ಉತ್ತಮ ಆರೋಗ್ಯ ಪಡೆಯಬಹುದು...

ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ- ಮಾಣಿಲಶ್ರೀ

ವಿಟ್ಲ: ನಮ್ಮ ಕಣ್ಣುಗಳಿಗೆ ಕಾಣದಿರುವ ಶಕ್ತಿಯೇ ದೇವರು. ದೇವರನ್ನು ಬಿಟ್ಟು ನಾವು ಯಾವ ಕಾರ್ಯವನ್ನೂ ಮಾಡಿದರೂ ನಿಷ್ಪ್ರಯೋಜಕ. ಉಸಿರು ಇದ್ದಷ್ಟು ದಿನ ಲೋಕಹಿತ ಕಾರ್ಯ ಮಾಡಬೇಕು. ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು...

ನೈಸರ್ಗಿಕ ವಿಪತ್ತುಗಳಿಗೆ ಮೂಲ ಕಾರಣವೆ ಅರಣ್ಯ ನಾಶ : ಮನೋಜ್ ಮಿನೇಜಸ್ 

ಬಂಟ್ವಾಳ: ನೈಸರ್ಗಿಕ ವಿಪತ್ತುಗಳಿಗೆ  ಮೂಲ ಕಾರಣವೆ ಅರಣ್ಯನಾಶ. ಜಲ ನೆಲ ಪ್ರಾಣಿ ಸಂಕುಲಗಳು ದೇವರ ಆಸ್ತಿ ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ .ಕಳೆದ 5 ವರ್ಷಗಳಿಂದ...

B.C. ROAD : ಕೆಂಪುಕಲ್ಲು, ಮರಳು ಅಭಾವ : ಬಂಟ್ವಾಳ ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ..

ಬಂಟ್ವಾಳ: ಕೆಂಪುಕಲ್ಲು ಕಲ್ಲಿನ ರಾಜಧನವನ್ನು 40 ರೂ.ಗಳಿಂದ 280 ರೂ.ಗಳಿಗೆ ಏರಿಕೆ ಮಾಡಿರುವ ರಾಜ್ಯ ಸರಕಾರವು ಮರಳು ತೆಗೆಯುವ ಕಾನೂನನ್ನೂ ಸರಳಗೊಳಿಸದೆ ಜನರಿಗೆ ಕದಿಯಲು ಪ್ರೇರಣೆ ನೀಡುತ್ತಿದೆ. ಕೆಂಪು ಕಲ್ಲು ಹಾಗೂ ಮರಳಿನ...