Monday, June 30, 2025

ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಬೆಂಕಿ

ಬಂಟ್ವಾಳ: ಕಮ್ಯುನಿಸ್ಟ್ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ‌.
ಬಿ.ಸಿ.ರೋಡಿನ ಬೈಪಾಸ್ ನ ನಾಲ್ಕು ಮಾರ್ಗದ ಬಳಿ ಕಾರ್ಯಾಚರಿಸುತ್ತಿರುವ ಕಮ್ಯುನಿಸ್ಟ್ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ.


ಕಚೇರಿಯ ಸಿಬ್ಬಂದಿ ಇಂದು ಬೆಳಿಗ್ಗೆ ಕಚೇರಿಗೆ ತೆರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಘಟನೆಯಿಂದ ಕಚೇರಿಯೊಳಗಿದ್ದ ಸಂಘಕ್ಕೆ ಸಂಬಂಧ ಪಟ್ಟ ಕಡತಗಳು ಹಾಗೂ ಮುಖ್ಯವಾದ ಅರ್ಜಿಗಳು, ವಿದ್ಯಾರ್ಥಿ ವೇತನದ ಸಂಬಂಧಿಸಿದ ದಾಖಲೆಗಳು ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಬರಿಮಲೆ ವಿವಾದದ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ಹರತಾಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೃತ್ಯ ಎಸಯಲಾಗಿದೆ ಎಂದು ಶಂಕಿಸಲಾಗಿದೆ.
ಸ್ಥಳ ದಲ್ಲಿ ಬಂಟ್ವಾಳ ಎ.ಎಸ್.ಪಿ.ಸೈದುಲ್ ಅಡಾವತ್, ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್, ಅಪರಾದ ವಿಭಾಗದ ಎಸ್.ಐ.ಹರೀಶ್ ಮೊಕ್ಕಾಂ ಹೂಡಿದ್ದು ಬಿಗಿ ಭದ್ರತೆ ಒದಗಿಸಿದ್ದಾರೆ.

More from the blog

ವೆನ್ ಲಾಕ್ : ಹೊರವಲಯದಲ್ಲಿ ಜಮೀನು ಕಾದಿರಿಸಲು ಸಚಿವರ ಸೂಚನೆ..

ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಯ ಭವಿಷ್ಯದ ಅಭಿವೃದ್ದಿಯ ದ್ರಷ್ಟಿಯಿಂದ ನಗರದ ಕೇಂದ್ರಭಾಗದ ಹೊರವಲಯದಲ್ಲಿ ಜಮೀನು ಕಾದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಅವರು ಸೋಮವಾರ ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆ...

ಬೋಳಂತೂರು : ಮನೆ ದುರಸ್ತಿ ಶ್ರಮದಾನ ಕಾರ್ಯಕ್ರಮ..

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ಇದರ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಭೀಮ್ ಸಂಜೀವಿನಿ ಬೋಳಂತೂರು ಇದರ ಜಂಟಿ...

ಮಾಣಿಲ – ಸಾಮೂಹಿಕ ಲಕ್ಷ್ಮೀ ಪೂಜೆ : ಧಾರ್ಮಿಕ ಸಭೆ..

ವಿಟ್ಲ: ಕೋಪ, ಅಹಂಕಾರ, ಗರ್ವಗಳೆಲ್ಲವೂ ಬದುಕಿಗೆ ಎಂದೂ ಪ್ರಯೋಜನಕ್ಕೆ ಬಾರವು. ಉದ್ರೇಕ ರೋಷ, ದ್ವೇಷಗಳಿಂದ ಏನೂ ಸಾಧಿಸಲಾಗದು. ಭ್ರಮೆಯಿಂದ ಹೊರಬೇಕಾದರೆ ಗುರುಶಕ್ತಿಯನ್ನು ಅರಿತುಕೊಳ್ಳುವ ಜ್ಞಾನವನ್ನು ಹೊಂದಬೇಕು. ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸುತ್ತಾ ಸಾಗೋಣ ಎಂದು...

ಫರಂಗಿಪೇಟೆ: ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ೭೫ರ ಮಂಗಳೂರು- ಬಿ.ಸಿ.ರೋಡು ಹೆದ್ದಾರಿಯನ್ನು ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಅಡ್ಯಾರ್ ನಿಂದ ಫರಂಗಿಪೇಟೆ ಮೂಲಕ ಕಡೆಗೋಳಿವರೆಗೆ...