ಬಂಟ್ವಾಳ : ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಬಾಗಶಃ ಸುಟ್ಟು ಭಸ್ಮವಾದ ಘಟನೆ ಕಲ್ಲಡ್ಕ ದಲ್ಲಿ ನಡೆದಿದೆ.

ಇಲ್ಲಿನ ಕಲ್ಲಡ್ಕ ಬಾಳ್ತಲಿ ಗ್ರಾಮದ ದಂಡೆಮಾರ್ ಚಂದ್ರಶೇಖರ್ ನಾಯ್ಕ್ ಅವರ ಮನೆಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮನೆ ಮಂದಿ ಎಲ್ಲರೂ ಸಂಬಂದಿಕರ ಮದುವೆಗೆ ಎಂದು ಬಂಟರ ಭವನ ಕ್ಕೆ ಹೋಗಿದ್ದರು.
ಮದುವೆಯಿಂದ ವಾಪಾಸು ಬರುವ ವೇಳೆ ಮನೆಗೆ ಬೆಂಕಿ ಹಚ್ಚಿಕೊಂಡು ಉರಿಯುತ್ತಿತ್ತು. ಮನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಅಡಿಕೆ ಇತ್ತು. ಎಲ್ಲವೂ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ. ಬಂಟ್ವಾಳ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್ , ಶ್ರೀ ಕಾಂತ್ ಶೆಟ್ಟಿ, ದೇವದಾಸ್ ಶೆಟ್ಟಿ, ದಿನೇಶ್ ಅಮ್ಟೂರು, ದೇವಿಪ್ರಸಾದ್ ಶೆಟ್ಟಿ , ಲಕ್ಷೀ ಗೋಪಾಲ ಆಚಾರ್ಯ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.