ಬಂಟ್ವಾಳ: ಇಲ್ಲಿನ ಬಾಮಿ ಜಂಕ್ಷನ್ ನಲ್ಲಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವಿರಾರು ರೂ ನಷ್ಟ ಸಂಭವಿಸಿದ ಘಟನೆ ರಾತ್ರಿ ಸುಮಾರು 8 ಗಂಟೆಯ ವೇಳೆ ನಡೆದಿದೆ.
ಬಂಟ್ವಾಳ ಭಾಮಿ ಜಂಕ್ಷನ್ ನಲ್ಲಿ ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಅರಳ ಮಾದವಪ್ರಭು ಅವರ ಸುಧಾ ಕೋಲ್ಡ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿಯೊಳಗಿದ್ದ ಸಾವಿರಾರು ರೂ ಬೆಲೆ ಬಾಳುವ ಸೊತ್ತುಗಳು ಬೆಂಕಿಗೆ ಅಹುತಿಯಗಿ ನಷ್ಟ ಸಂಭವಿಸಿದೆ .
ಶಾರ್ಟ್ ಸರ್ಕ್ಯೂಟ್ ನಿಂದ ಅಥವಾ ಇನ್ನಾವುದೇ ಕಾರಣದಿಂದ ಬೆಂಕಿ ತಗುಲಿದೆಯಾ ಎನ್ನುವುದು ತನಿಖೆ ಯ ಬಳಿಕ ತಿಳಿಯಬೇಕಾಗಿದೆ.
ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ , ಅಪರಾಧ ವಿಭಾಗದ ಎಸ್.ಐ. ಹರೀಶ್ , ಸ್ಥಳೀಯ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಸಹಿತ ಸಾರ್ವಜನಿಕ ರು ಬೆಂಕಿ ನಂದಿಸಲು ಪ್ರಯತ್ನಿಸಿದರು
