ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಬೆಂಜನಪದವು ಇಲ್ಲಿ ರೋಟಾರಿ ಕ್ಲಬ್ ಬಂಟ್ವಾಳ ಮತ್ತು ಇಂಟರ್ಯಾಕ್ಟ್ ಕ್ಲಬ್ ಬೆಂಜನಪದವು ಸಹಯೋಗದೊಂದಿಗೆ ಹೃದಯ -ಆರೋಗ್ಯ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಡಾಕ್ಟರ್ ಸೌಮ್ಯ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು, ಹೃದಯ ಸ್ಥಂಭನ ಆದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿ ಮಾದರಿಗಳ ಸಹಾಯದಿಂದ ಪ್ರಾಯೋಗಿಕವಾಗಿ ಅನುಸರಿಸಬೇಕಾದ ಪ್ರಥಮ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿಸಿದರು. ಡಾಕ್ಟರ್ ನಾಗಾರ್ಜುನ್ ಚಿಕ್ಕ ಮಕ್ಕಳಿಂದ ಆರಂಭಗೊಂಡು 60 ವರ್ಷ ಮೇಲ್ಪಟ್ಟವರಿಗೆ ಮಾಡುವ ಚಿಕಿತ್ಸಾ ವಿಧಾನಗಳ ಭಿನ್ನತೆಯನ್ನು ತಿಳಿಸಿ ಪ್ರತಿ ವಿದ್ಯಾರ್ಥಿಗಳಿಗೆ ಮಾದರಿಗಳನ್ನು ನೀಡಿ ಪ್ರಾಯೋಗಿಕವಾಗಿ ಚಿಕಿತ್ಸಾ ವಿಧಾನವನ್ನು ಮಾಡಿಸಿದರು.
ಇಂಟರ್ಯಾಕ್ಟ್ ನೋಡಲ್ ಶಿಕ್ಷಕಿ ಹೇಮಾ ಕೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕಲಾ ಶಿಕ್ಷಕ ಮಹಮ್ಮದ್ ಇಕ್ಬಾಲ್ ವಂದಿಸಿದರು.

