Saturday, July 12, 2025

ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದವರು ಶಾಲಾ ಪರಿಸರವನ್ನು ಸ್ವಚ್ಛಗೊಳಿಸುವುದರ ಮೂಲಕ ಮಾದರಿ ಕಾರ್ಯ

ಬೆಳ್ತಂಗಡಿ :ಹಲವು ದಿನಗಳ ಕಾಲ ಲಾಕ್’ಡೌನ್’ನಿಂದಾಗಿ ತಮ್ಮ ಊರಿಗೆ ಮರಳಲಾಗದೆ ಪರದಾಡುತ್ತಿರುವವರಿಗೆ ಸುಸಂದರ್ಭ ಎನ್ನುವಂತೆ ತಮ್ಮ ಊರಿಗೆ ಬರುವಂತಹ ಅವಾಕಾಶ ಸಿಕ್ಕಿತು ಎಂದಾಗ “ಊರಿಗೆ ಮಾತ್ರ ಮನೆಗಲ್ಲ” ಅಂತ ಅವರವರ ಊರಿನ ಶಾಲೆಗಳಲ್ಲಿ ಕಾರಂಟೈನ್ ಮಾಡಲಾಯಿತು. ಈ ಸಮಯದಲ್ಲಿ ಏನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರವಾಗಿದ್ದಾರೆ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನ್ ಆದವರು.

ಮುಂಬಯಿಂದ ಆಗಮಿಸಿದ ಹಲವು ಮಂದಿ ಸುಮ್ಮನೆ ಕೂರದೆ ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ಸಮಯದ ಸದುಪಯೋಗ ತಿಳಿಸಿಕೊಟ್ಟಿದ್ದಾರೆ.

ಶಾಲಾ‌‌ ಆವರಣದ ಸ್ವಚ್ಛತಾ ಕೆಲಸವನ್ನು ಮಾಡಿದರು.ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ವಚ್ಚತಾ ಕಾರ್ಯವನ್ನು ಮಾಡಿ ಮಾದರಿಯಾಗಿದ್ದಾರೆ.

ಕೂಕ್ರಬೆಟ್ಟು ಶಾಲೆಯಲ್ಲಿ 25 ಮಂದಿ, ಮರೋಡಿ ಅನುದಾನಿತ ಶಾಲೆಯಲ್ಲಿ 9 ಮಂದಿ, ಮಾವಿನಕಟ್ಟೆ ಶಾಲೆಯಲ್ಲಿ13 ಮಂದಿ ಹಾಗು ಹೋಂ ಕ್ವಾರಂಟೈನ್’ನಲ್ಲಿ 3 ಮಂದಿಯನ್ನು ಇರಿಸಲಾಗಿದ್ದು, ಮುಂಬಯಿಲಿದ್ದ ಒಟ್ಟು 50 ಮಂದಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬೆಳ್ತಂಗಡಿಯ ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೊಟ್ಯಾನ್, ರತ್ನಾಕರ ಬುನ್ನಾನ್ ಹಾಗೂ‌ ಊರವರ ಸಹಕಾರದೊಂದಿಗೆ ಊರಿಗೆ ಕರೆತರುವ ಕೆಲಸ ಮಾಡಲಾಗಿದೆ.
ಕ್ವಾರಂಟೈನ್’ನಲ್ಲಿದ್ದವರ ಈ‌ ನಡೆ ಶ್ಲಾಘನೀಯ ಕಾರ್ಯ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದರು‌ ಹಾಗು ಆ ಶಾಲೆಯಲ್ಲಿ ಇದ್ದವರ ರಿಪೋರ್ಟ್ ಕೂಡ ನೆಗೆಟಿವ್ ಬಂದಿದ್ದು ಊರವರಿಗೆ ಸಂತಸ ತರುವುದರೊಂದಿಗೆ ಕೊರೊನಾ ಭೀತಿಯ ದಿನಗಳಲ್ಲಿಯೂ ಎದೆಗುಂದದೆ ತಮ್ಮ ಕ್ವಾರಂಟೈನ್ ದಿನಗಳನ್ನು ‌ವಿಭಿನ್ನವಾಗಿಸಿದ್ದಾರೆ.

More from the blog

ತುಂಬೆಯ ಕಾವ್ಯ ಕೆ. ನಾಯಕ್ ಗೆ ಪಿ.ಎಚ್.ಡಿ ಪದವಿ..

ಬಂಟ್ವಾಳ: ತುಂಬೆಯ ಕಾವ್ಯ. ಕೆ. ನಾಯಕ್ ಇವರು ಐಐಎಸ್‌ಸಿ‌ನ ಅಂತರ್‌ಶಿಸ್ತಿನ ವಿಜ್ಞಾನ ವಿಭಾಗದ ಡೀನ್ ಹಾಗೂ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ನವಕಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ “ಎಲೆಕ್ಟ್ರೋಕೆಮಿಕಲ್...

ಫರಂಗಿಪೇಟೆ: ಸಂಕಲ್ಪ ಸಿದ್ಧಿಗಾಗಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ..

ಬಂಟ್ವಾಳ : ಸಂಕಲ್ಪ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ಜು.12ರಂದು ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...