Friday, January 30, 2026

ಬೆಳ್ತಂಗಡಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗೆ ಉರುಳಿದ ಭಾರಿ ಗಾತ್ರದ ಮರ

ಬೆಳ್ತಂಗಡಿ: ಕೊರೊನಾ ಅಟ್ಟಹಾಸದ ನಡುವೆ ವರುಣನ ಅರ್ಭಟವು ಹೆಚ್ಚಾಗಿದ್ದು ಬೆಳ್ತಂಗಡಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಜೈನ್ ಪೇಟೆ ಮಾಜಿ ಶಾಸಕ ವಸಂತ ಬಂಗೇರ ನಿವಾಸದ ಎದುರು ಭಾರಿ ಗಾತ್ರದ ಮರ ಬಿದ್ದು ಕೆಲ‌ ಸಮಯ ಸಂಚಾರಕ್ಕೆ ತೊಡಕು ಉಂಟಾಯಿತು.

ಗಾಳಿಯ ರಭಸಕ್ಕೆ 2 ವಿದ್ಯುತ್ ಕಂಬ ಕೂಡ ಮುರಿದು ಬಿದ್ದಿದ್ದು ಟ್ರಾಫಿಕ್ ಪೋಲಿಸ್, ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ‌ ಕೈಗೊಂಡರು.

More from the blog

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಶಿಕ್ಷಣ ಇಲಾಖೆ ಆದೇಶ : ಷರತ್ತುಗಳೇನು?

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರಿಗೆ ಋತುಚಕ್ರ ರಜೆ ನೀಡಲು ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರಿಗೆ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಲಾಗಿದೆ. ...

9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿಗೆ ಪ್ರಭಾಕರ ಪ್ರಭು ಮನವಿ 

ಬಂಟ್ವಾಳ : ನೆನೆಗುದಿಗೆ ಬಿದ್ದಿರುವ 9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿ ಮಾಡಲು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್...

ವಿಟ್ಲ ಜಾತ್ರೆ ಅಂಗಡಿ ಏಲಂನಲ್ಲಿ ಭಾರೀ ಅವ್ಯವಹಾರದ ದೂರು..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಅಂಗಡಿ ಏಲಂನ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಕೆ. ಎಂಬವರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ. ಜಾತ್ರೆಗೆ ಸಂತೆ...