ಬೆಳ್ತಂಗಡಿ: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕನ್ನು ಗ್ರೀನ್ ಝೋನ್ ಎಂದು ಘೋಷಿಸಲಾಗಿದೆ. ಕೊವೀಡ್-19 ಕೇಸ್ ದಾಖಾಲಾಗಿರುವುದನ್ನು ಆಧರಿಸಿಕೊಂಡು ರಾಜ್ಯ ಸರ್ಕಾರ ಜಿಲ್ಲೆ ಹಾಗೂ ತಾಲೂಕುಗಳನ್ನು 4 ಬಣ್ಣಗಳಲ್ಲಿ ವಿಂಗಡಿಸಲಾಗಿದ್ದು, ಹಲವು ದಿನಗಳಿಂದ ಕೊವೀಡ್ ಕೇಸ್ ಪತ್ತೆಯಾಗದ ಹಿನ್ನೆಲೆ ಬೆಳ್ತಂಗಡಿ ತಾಲೂಕನ್ನು ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ.

ದ.ಕ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕೊರೋನಾ ಕೇಸ್ ಇರುವುದನ್ನು ಗುರುತಿಸಿ ಈ ಜಿಲ್ಲೆಯ ಎಲ್ಲಾ ತಾಲೂಕನ್ನು ವಿವಿಧ ಝೋನ್ ಗಳಾಗಿ ವಿಂಗಡಿಸಲಾಗಿತ್ತು. ಅದರಂತೆ ಬೆಳ್ತಂಗಡಿ ತಾಲೂಕಿನಲ್ಲಿ ಕೇಸ್ ಪತ್ತೆಯಾಗದ ಕಾರಣ ಆರೆಂಜ್ ಝೋನ್ ಎಂದು ಘೋಷಿಸಿದೆ.
ಉಳಿದಂತೆ ಮಂಗಳೂರು, ಪುತ್ತೂರು ಹಾಗೂ ಬಂಟ್ವಾಳ ತಾಲೂಕುಗಳನ್ನು ಆರೆಂಜ್ ಝೋನ್ ಎಂದು ಗುರುತಿಸಿದೆ. ಬೆಳ್ತಂಗಡಿ, ಕಡಬ, ಉಳ್ಳಾಲ, ಮೂಡುಬಿದ್ರೆ, ಸುಳ್ಯ ತಾಲೂಕುಗಳಲ್ಲಿ ಯಾವುದೇ ಪ್ರಕರಣ ಇಲ್ಲದ ಹಿನ್ನೆಲೆ ಗ್ರೀನ್ ಝೋನ್ ಎನಿಸಿಕೊಂಡಿದೆ

