ಬೆಳ್ತಂಗಡಿ: ಜು.14 ರಿಂದ ಸ್ವಯಂ ಪ್ರೇರಿತ ಬಂದ್ ಗೆ ಶಾಸಕರ ಅಧ್ಯಕ್ಷತೆಯಲ್ಲಿ ಜು.11 ರಂದು ನಡೆದ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಹದಿನೈದು ದಿನಗಳ ಕಾಲ ಮಧ್ಯಾಹ್ನ 2:00 ಗಂಟೆಯಿಂದ ಸ್ವಯಂ ಘೋಷಿತ ಬಂದ್ ವಿಧಿಸಲಾಗಿದೆ.
ಧ್ವನಿವರ್ದಕಗಳ ಮೂಲಕ ಪ್ರತೀ ಗ್ರಾಮ ಪಂಚಾಯತ್ ಹಾಗೂ ನಗರ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲು ನಿರ್ಧರಿಸಲಾಯಿತು.ಬಂದ್ ಮಾಡದೆ ವ್ಯವಹಾರ ನಡೆಸಿದವರನ್ನು ಜನರು ಪ್ರಶ್ನಿಸಿದರೆ ವ್ಯವಹಾರ ಮಾಡುವವರೇ ಉತ್ತರಿಸಬೇಕು ಅದಕ್ಕೆ ತಾಲೂಕು ಆಡಳಿತ ಜವಬ್ದಾರರಲ್ಲ ಹಾಗು ತಾಲೂಕಿನಲ್ಲಿ 15 ದಿನಗಳ ಕಾಲ ನಡೆಯುವ ಈ ಸ್ವಯಂ ಘೋಷಿತ ಬಂದ್ ಗೆ ಎಲ್ಲಾರು ಸಹಕಾರ ನೀಡಬೇಕಾಗಿ ಶಾಸಕ ಹರೀಶ್ ಪೂಂಜಾ ಮಾನವಿ ಮಾಡಿದರು.
