Wednesday, July 9, 2025

ವಿಶ್ವ ದಾಖಲೆಯ ಕನಸನ್ನು ನನಸಾಗಿಸಿದ ಬೋಧಿ ಮೀಡಿಯ

ಬೆಳ್ತಂಗಡಿ: ಕೊರೊನಾ ಮಹಾಮಾರಿಯ ಅಟ್ಟಹಾಸದ ನಡುವೆಯು ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಳ್ತಂಗಡಿಯ ಉತ್ಸಾಹಿ ಯುವಕರ ತಂಡವೊಂದು ಬೋಧಿ ಮೀಡಿಯಾ ಎಂಬ ಯೂಟ್ಯೂಬ್ ಚಾನಲ್ ಮೂಲಕ ವಿಶ್ವ ದಾಖಲೆಯ ಕನಸನ್ನು ನನಸಾಗಿಸಿಕೊಂಡಿದೆ.
ಲಾಕ್ ಡೌನ್ ನಲ್ಲಿ ಮನೆಯಲ್ಲಿ ಕೂತು ಏನು ಮಾಡಬಹುದು ಎಂಬ ಎಷ್ಟೋ ಜನರ ಯೋಚನೆಗೆ ಈ ಯುವತಂಡ ವಿಶ್ವ ದಾಖಲೆಯನ್ನು ಮಾಡಿ ಸಮಯದ ಸದುಪಯೋಗ ತಿಳಿಸಿಕೊಟ್ಟಿದೆ. ಈ ತಂಡವೂ ಸಮೂಹ ಪ್ರತಿಭಾ ಪ್ರದರ್ಶನ ಎಂಬ ಕಾರ್ಯಕ್ರಮಕ್ಕೆ ಗೊಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸಂಸ್ಥೆ ವಿಶ್ವದಾಖಲೆ ಮಾನ್ಯತೆಯ ಪ್ರಮಾಣಪತ್ರ ನೀಡಿ‌‌ ಗೌರವಿಸಿದೆ. ಸುಮಾರು 2 ಸಾವಿರ ಮಕ್ಕಳು ಮನೆಯಲ್ಲೆ ವೀಡಿಯೋ ಮುಖಾಂತರ ಏಕಕಾಲದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಕಾರ್ಯಕ್ರಮ ವಿಶ್ವ ದಾಖಲೆ ಮಾಡಿತು.
ಬೋಧಿ ಮೀಡಿಯ ಎಂಬ ಯೂಟ್ಯೂಬ್ ಚಾನಲ್ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಮಿತೇಶ್ ಎಸ್. ಬಾರ್ಯ, ಅನೀಶ್, ಅನನ್ಯ, ತೇಜಸ್ವಿನಿ, ದೀಕ್ಷಿತ್ ಕೆ., ಅಕ್ಷಯ್, ದೀಕ್ಷಿತ್ ಭಂಡಾರಿ, ಚಂದ್ರಹಾಸ ಬಳಂಜ, ಹರ್ಷಿತ ಟಿ.ಪಿ.
ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.

More from the blog

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಲಕ್ಷ ಕುಂಕುಮಾರ್ಚನೆ..

ಪೊಳಲಿ: ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರಗಂಜಿಮಠ ಪುನರುತ್ಥಾನ ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರ ಪುನರ್ ನಿರ್ಮಾಣದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದAತೆ ಜು.೮ರಂದು ಮಂಗಳವಾರ ಶ್ರೀ ಕ್ಷೇತ್ರ ಪೊಳಲಿ ಸಾವಿರ ಸೀಮೆಯ...