ಬೆಳ್ತಂಗಡಿ: ಮಚ್ಚಿನ ಕೊಡಿಯೇಲು ಎಂಬಲ್ಲಿ ಹೆಜ್ಜೇನು ದಾಳಿಯಿಂದ ಆರು ಮಂದಿ ಗಾಯಗೊಂಡಿದ್ದು, ಈ ಪೈಕಿ ಓರ್ವನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಕೊಡಿಯೇಲು ಕೋರೆಗೆ ತಿರುಗುವ ರಸ್ತೆ ಬಳಿಯಲ್ಲಿ ಮರದಲ್ಲಿದ್ದ ಹೆಜ್ಜೇನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ದಾಳಿ ನಡೆಸಿದೆ.
ಕೋರೆಗೆ ಕೆಲಸಕ್ಕೆ ಹೋಗುತ್ತಿದ್ದ ನಾಲ್ವರು ಕಾರ್ಮಿಕರು, ಬಳ್ಳಮಂಜ ಮೀನು ಮಾರುಕಟ್ಟೆಗೆ ಕೆಲಸಕ್ಕೆ ಬರುತ್ತಿದ್ದ ಯುವಕ ಸಹಿತ ಆರು ಮಂದಿಗೆ ಹೆಜ್ಜೇನು ಕಚ್ಚಿದೆ. ಈ ಪೈಕಿ ಮೀನು ಮಾರುಕಟ್ಟೆಗೆ ಕೆಲಸಕ್ಕೆ ಬರುತ್ತಿದ್ದವನಿಗೆ ಹೆಚ್ಚು ಗಾಯವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.