ಬೆಳ್ತಂಗಡಿ: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಅಕ್ರಮವಾಗಿ ಗೋ ಸಾಗಾಟ ಮಾಡುತಿದ್ದ ಇಕೋ ಪೋರ್ಡ್ ಕಾರು ಮಗುಚಿ ಬಿದ್ದು ಅಕ್ರಮ ಬಯಲುಗೊಂಡ ಘಟನೆ ನಡೆದಿದೆ.



6 ದನಗಳನ್ನು ತುಂಬಿಸಿಕೊಂಡು ಬರುತಿದ್ದ ವೇಳೆ ಚಾಲಕನ ನಿಯಂತ್ರನ ತಪ್ಪಿ ಕಾರು ಮುಂಡಾಜೆ ಎಂಬಲ್ಲಿ ಕಮರಿಗೆ ಉರುಳಿದಂತೆ ಕಾರಿನೊಳಗಿದ್ದ 5 ದನದಗಳು ಸತ್ತು ಬಿದ್ದಿದ್ದು ಒಂದು ಬದುಕುಳಿದಿದೆ.












