ಬಂಟ್ವಾಳ: ಬೆಳ್ತಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ ಮುಂಡೂರು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದ ಘಟನೆ ಐಟಿಐ ಉಪನ್ಯಾಸ ಕ ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ಮಾಲಾಡಿ ಸರಕಾರಿ ಐಟಿಐ ಉಪನ್ಯಾಸಕ ವಿಕ್ರಂ ಎಂಬವರನ್ನು ತಡರಾತ್ರಿ ಯಾರೋ ಅಪರಿಚಿತರು ಮಚ್ಚಿನಿಂದ ಕಡಿದು ಕೊಲೆ ಮಾಡಿ ಪರಾಯಾಗಿದ್ದರು.
ಈ ಕೊಲೆಯ ಪತ್ತೆ ಗಾಗಿ ಎಸ್.ಪಿ. ಲಕ್ಮೀಪ್ರಸಾದ್ ಅವರು ವಿಶೇಷ ತಂಡ ರಚನೆ ಮಾಡಿದ್ದರು.
ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ ತಂಡ ಮತ್ತು ಬೆಳ್ತಂಗಡಿ ಇನ್ಸ್ ಪೆಕ್ಟರ್ ಸಂದೇಶ್ ಅವರ ಎರಡು ತಂಡಗಳು ಕಾರ್ಯಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಡರಾತ್ರಿ 11ಗಂಟೆಗೆ ಅಪರಿಚಿತ ದ್ವಿಚಕ್ರ ವಾಹನ ನಿಂತದ್ದನ್ನು ಸ್ಥಳಿಯರು ನೋಡಿದ್ದು ಬಳಿಕ ಯಾವುದೋ ಕಾರಣಕ್ಕೆ ಕೊಲೆಮಾಡಿರಬಹುದು ಎಂದು ಶಂಕಿಶಲಾಗಿದೆ.
ವಿಕ್ರಮ್ ರವರ ಕಾರಿನ ಬಳಿ ಮದ್ಯದ ಬಾಟಲಿ ಇದ್ದು ಕುಡಿದ ಮತ್ತಿನಲ್ಲಿ ಜಗಳವಾಡಿ ಕೊಲೆ ಮಾಡಿರಬಹುದೇ ಅಥವಾ ಜಮೀನಿನ ವಿವಾದವೋ ಅಥವಾ ಇನ್ನಾವುದೋ ಕಾರಣಕ್ಕೆ ಕೊಲೆ ಮಾಡಿರಬಹುದೋ ಎಂಬುದು ಪೋಲೀಸ್ ತನಿಖೆಯ ಬಳಿಕ ತಿಳಿಯಬೇಕಾಗಿದೆ.