ಬಂಟ್ವಾಳ: ಕೊರೊನಾ ವೈರಸ್ ನಿಯಂತ್ರಣ ದ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ.
ಹಾಗಾಗಿ ಜನರು ಅಗತ್ಯವಸ್ತುಗಳ ಖರೀದಿ ಗೆ ಒಂದಷ್ಟು ತೊಂದರೆ ಗಳು ಅಗುತ್ತಿದೆ.
ಹಾಗಾಗಿ ಜಿಲ್ಲೆಯ ಲ್ಲಿ ಜನರು ಅಗತ್ಯ ವಸ್ತುಗಳನ್ನು ಪಡೆಯುವ ಸಲುವಾಗಿ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಗಳ ವರಗೆ ಸಡಿಲಿಕೆ ಮಾಡಲಾಗಿದೆ.
ಲಾಕ್ ಡೌನ ಅಗಿರುವ ಈ ಸಂದರ್ಭದಲ್ಲಿ ಅಗತ್ಯವಸ್ತುಗಳ ಮಾರಾಟ ಮಾಡುವ ಅಂಗಡಿ ಮಾಲೀಕರು ಯಾರು ಕೂಡ ದರದಲ್ಲಿ ಏರಿಕೆಮಾಡಬಾರದು ಒಂದು ವೇಳೆ ಮಾಡಿದರೆ ಅಂತವರ ಮೇಲೆ ಜಿಲ್ಲಾಡಳಿತ ಕಾನೂನು ಕ್ರಮಕೈಗೊಳ್ಳಲು ಸಿದ್ದವಿದೆ ಎಂಬ ಮಾತನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ನಡುವೆ ಬಂಟ್ವಾಳ ತಾಲೂಕಿನ ಕೆಲ ಅಂಗಡಿ ಮಾಲಕರು ಹಾಗೂ ತರಕಾರಿ ವ್ಯಾಪಾರಿಗಳು ಅಗತ್ಯವಸ್ತುಗಳಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಗಳು ಕೇಳಿಬಂದಿವೆ.
ಒಂದು ವೇಳೆ ಈ ಬಗ್ಗೆ ಪ್ರಶ್ನೆ ಮಾಡಿದ ಗಿರಾಕಿಗಳಿಗೆ ಸಾಮಾಗ್ರಿಗಳನ್ನು ನೀಡದೆ ವಾಪಾಸು ಕಳುಹಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.
ಕೋವಿಡ್ 19 ನ ಈ ಸಂದರ್ಭದಲ್ಲಿ ಜನಸಾಮಾನ್ಯರು ಸಾಕಷ್ಟು ಕಷ್ಟದಲ್ಲಿದ್ದಾರೆ.
ಹಾಗಾಗಿ ಜನಸಾಮಾನ್ಯರ ನಾಡಿಮಿಡಿತವನ್ನು ಅಂದಾಜಿಸುವ ಕೆಲಸ ಅಂಗಡಿ ಮಾಲಕರಿರಬೇಕು.
ಪಾಣೆಮಂಗಳೂರು ಆಲಡ್ಕ ಕೋಳಿ ಪಾರಂ ಒಂದರಲ್ಲಿ ಕೋಳಿ ಅಂಗಡಿ ಮಾಲಕ ಮಂಗಳವಾರ ದುಪ್ಪಟ್ಟು ಹಣ ಪಡೆದುಕೊಂಡಿದ್ದಾನೆ ಎಂಬ ಆರೋಪಗಳು ಕೂಡ ಕೇಳಿಬಂದಿವೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಂದೇಶ ಗಳು ರವಾನೆಯಾಗುತ್ತಿದ್ದವು.
ಇಂತಹ ಘಟನೆಗಳು ಬಹುತೇಕ ಕಡೆಗಳಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದು ಅಧಿಕಾರಿ ವರ್ಗ ಇಂತವರಿಗೆ ಬ್ರೇಕ್ ಹಾಕಬೇಕಾಗಿದೆ.
ಲಾಕ್ ಡೌನ್ ಅಗಿ ಅಗತ್ಯ ಸಾಮಾಗ್ರಿಗಳ ಕೊರತೆ ಅನುಭವಿಸುತ್ತಿರುವ ಕಾಲಘಟ್ಟದಲ್ಲಿ ದುಪ್ಪಟ್ಟು ಹಣ ನೀಡಿಯಾದರೂ ಪಡೆಯುವವರೇ ಹೆಚ್ಚು.
ಆದರೆ
ಈ ಬಗ್ಗೆ ದೂರು ಕೊಡಲು ಗ್ರಾಹಕರು ಮಾತ್ರ ಮುಂದಾಗುತ್ತಿಲ್ಲ.
ದೂರು ನೀಡಿದರೆ ಮತ್ತೆ ಎಲ್ಲಿ ಸಮಸ್ಯೆ ಅಗುತ್ತದಾ ಎಂಬ ಭಯದಿಂದ .














