ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನಲ್ಲಿ 39 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರಾಜೇಶ್ವರಿ ಅವರ ಬೀಳ್ಕೊಡುಗೆ, ಗೌರವ ಸಮಾರಂಭ ಶುಕ್ರವಾರ ಬ್ಯಾಂಕಿನ ವಠಾರದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಎಲ್.ಎನ್.ಕೂಡೂರು ಮಾತನಾಡಿ ಸಿಬ್ಬಂದಿಗಳ ವಿನಯ, ವಿಧೇಯತೆಯ ಗ್ರಾಹಕ ಸೇವೆಯಿಂದ ಸಹಕಾರಿ ಬ್ಯಾಂಕ್‌ಗಳ ಆರ್ಥಿಕ ವ್ಯವಹಾರ ಪ್ರಗತಿ ಸಾಧಿಸುತ್ತಲೇ ಸಾಗುತ್ತದೆ. ರಾಜೇಶ್ವರಿ ಅವರ ಕರ್ತವ್ಯನಿಷ್ಠೆ ಪ್ರಾಮಾಣಿಕತೆ ಸದಾ ನೆನಪಿನಲ್ಲಿ ಉಳಿಯುವಂತಾಗಿದೆ ಎಂದು ತಿಳಿಸಿದರು.
ನಿವೃತ್ತರ ಪರವಾಗಿ ಬ್ಯಾಂಕಿನ ನಿರ್ದೇಶಕ ಎ.ಅನಂತಭಟ್, ಮುಖ್ಯ ಕಾರ್‍ಯ ನಿರ್ವಾಹಕ ಮೋನಪ್ಪ ಗೌಡ ಸೇರಾಜೆ, ಶ್ರೀಕಾಂತ್, ಸೇಲ್ಸ್ ಅಧಿಕಾರಿ ಸವಿತ ನಾಗರಾಜ್, ಇಂಜಿನಿಯರ್ ರಾಘವೇಂದ್ರ ಪೈ, ಸುರೇಶ್ ಬನಾರಿ, ನಿವೃತ್ತ ಮುಖ್ಯ ಕಾರ್‍ಯ ನಿರ್ವಹಣಾಧಿಕಾರಿ ವಿ.ಎಸ್.ಕೆದಿಲಾಯ, ಶಿವಣ್ಣ ಮಾತನಾಡಿದರು. ನಿವೃತ್ತರ ಪತಿ, ಜೆಸಿಐ ರಾಷ್ಟ್ರೀಯ ತರಬೇತುದಾರ ಶ್ರೀಧರ ಕೊಡಕ್ಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಉಪಾಧ್ಯಕ್ಷ ಜಗನ್ನಾಥ ಹೆಚ್. ಸಾಲ್ಯಾನ್, ನಿರ್ದೇಶಕರಾದ ಹರೀಶ್ ನಾಯಕ್ ವಿಟ್ಲ, ದಿನೇಶ್ ವಿಟ್ಲ, ಮನೋರಂಜನ್ ಕೆ.ಆರ್. ಕರೈ, ಉದಯ ಕುಮಾರ್ ಆಲಂಗಾರು, ಗೀತಾ ವಿಟ್ಲ, ಪ್ರೀತಾ ಭಟ್ ಕೆ.
ನಿರ್ದೇಶಕ ಪ್ರಕಾಶ್ ಕೆ.ಎಸ್. ಸ್ವಾಗತಿಸಿದರು. ವಿಶ್ವನಾಥ ಎಂ. ವೀರಕಂಭ ವಂದಿಸಿದರು.
