ವಿಟ್ಲ: ಅನಿಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಜೀವಿ ಬಂಗೇರ ಇವರು ನಿವೃತ್ತಿ ಹೊಂದಿದ್ದು ಅವರನ್ನು ಶಾಲಾಭಿವೃದ್ದಿ ಸಮಿತಿ ಹಾಗೂ ನಾಗರಿಕರ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸ್ತ್ರೀ ಶಕ್ತಿ ಸಂಘಟನೆಯ ವತಿಯಿಂದಲೂ ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಸೊರಂಗದ ಮೂಲೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ, ಶಿಕ್ಷಣ ತಜ್ಞ ಈಶ್ವರ ಭಟ್ ಪೂರ್ಲಪ್ಪಾಡಿ, ಗಂಗಾಧರ ಗೌಡ, ಅಶೋಕ ಅನಿಲಕಟ್ಟೆ, ಭಾಗವಹಿಸಿ ರಾಜೀವಯವರ ಬಗ್ಗೆ ಮಾತನಾಡಿದರು.
ಶಿಕ್ಷಕ ಜಯರಾಮ ಸ್ವಾಗತಿಸಿದರು, ಉಷಾ ಅನಿಲಕಟ್ಟೆ ವಂದಿಸಿದರು. ಹಳೆ ವಿದ್ಯಾರ್ಥಿ ನಂದಿತಾ ನಿರೂಪಿಸಿದರು.

