ಬಂಟ್ವಾಳ: ಬಿಸಿರೋಡಿನ ಹೃದಯ ಭಾಗದಲ್ಲಿ ಪುರಸಭಾ ಇಲಾಖೆಗೆ ಸಂಬಂದಿಸಿದ ಕುಡಿಯುವ ನೀರಿನ ಪೈಪ್ ಒಡೆದು ಹೋದ ಪರಿಣಾಮ ಬಿಸಿರೋಡ್ ಪೇಟೆಯಲ್ಲಿ ಕಳೆದ ಎರಡು ದಿನಗಳಿಂದ ನೀರಿಲ್ಲ.

ಬಿಸಿರೋಡಿನ ಸರ್ವೀಸ್ ರಸ್ತೆಯ ಕೃಷ್ಣಾನಂದ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಾಂಕ್ರೀಟ್ ನ ಅಡಿಯಲ್ಲಿ ನೀರಿನ ಪೈಪ್ ಶನಿವಾರ ಒಡೆದು ಹೋಗಿ ನೀರು ಪೋಲಾಗುತ್ತಿತ್ತು.
ಪುರಸಭಾ ಇಲಾಖೆ ಯ ಸಿಬ್ಬಂದಿ ಗಳು
ಸೋಮವಾರ ಬೆಳಿಗ್ಗೆ ಯಿಂದ ಸರ್ವೀಸ್ ರಸ್ತೆ ಯ ವಾಹನ ಸಂಚಾರ ಬಂದ್ ಮಾಡಿ ಕಾಮಗಾರಿ ಪ್ರಾರಂಭಿಸಿದ್ದಾರೆ.
ಬಿಸಿರೋಡ್ ಪೇಟೆ ಗೆ ನೀರಿಣುಸುವ ಹತ್ತು ಇಂಚು ಪಿಯುಸಿ ಪೈಪ್ ಒಡೆದು ಹೋಗಿ ಸಮಸ್ಯೆ ಉಂಟಾಗಿದೆ.
ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಯ ವೇಳೆ ಪಿಯುಸಿ ಪೈಪ್ ಬದಲಾಯಿಸಿ ಬೇರೆ ಪೈಪ್ ಹಾಕಿದ್ದರೆ ಈ ರೀತಿ ಪದೇ ಪದೇ ಪೈಪ್ ಒಡೆಯುವುದು ತಪ್ಪುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ.
ಇದೀಗ ಪೈಪ್ ಸರಿಪಡಿಸಲು ಸರ್ವೀಸ್ ರಸ್ತೆಯ ಕಾಂಕ್ರೀಟ್ ನ್ನು ಮೆಷಿನ್ ಬಳಸಿ ಒಡೆಯಲಾಗುತ್ತಿದೆ.
ಬೆಳಿಗ್ಗೆ ಯಿಂದಲೂ ರಸ್ತೆಯನ್ನು ಅಗೆಯುತ್ತಿದ್ದು ರಾತ್ರಿಯವರೆಗೂ ಪೈಪ್ ಲೈನ್ ಸಿಕ್ಕಿಲ್ಲ.
ಕಾಮಗಾರಿ ನಡೆಯುವ ಸ್ಥಳ ಕ್ಕೆ ಸ್ಥಳೀಯ ಜನಪ್ರತಿನಿಧಿ
ಆಗಮಿಸಿದ್ದಾರೆ ಎಂದು ಪೋಲೀಸರಿಗೆ ದೂರು ಕೂಡಾ ಸಲ್ಲಿಕೆಯಾಗಿತ್ತು.
ಬಳಿಕ ಸ್ಥಳ ಕ್ಕೆ ಪೋಲೀಸರು ಆಗಮಿಸಿ ರಾಜಕೀಯ ಪಕ್ಷಗಳ ಯಾರು ಕೂಡಾ ಸ್ಥಳ ಕ್ಕೆ ಬೇಟಿ ನೀಡದಂತೆ ಎಚ್ಚರಿಕೆ ವಹಸಿ ಕಾಮಗಾರಿ ನಡೆಯುತ್ತಿದೆ.